ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಶೌಚಾಲಯ ನಿರ್ಮಿಸಿಕೊಳ್ಳಲು ಸಹಾಯಧನ ವಿತರಣೆ

Rashmi Kasaragodu
Updated On : 31 Oct 2013, 11:25 am

ಕ.ಪ್ರ.ವಾರ್ತೆ   ಸಕಲೇಶಪುರ   ಅ.31
ಶೌಚಮುಕ್ತ ಪಟ್ಟಣವನ್ನಾಗಿಸುವ ಉದ್ದೇಶದಿಂದ ಬಡವರಿಗೆ ಶೌಚಾಲಯ ನಿರ್ಮಿಸಿಕೊಳ್ಳಲು ಪುರಸಭೆ ವತಿಯಿಂದ ಸಹಾಯಧನ ನೀಡಲು ಉದ್ದೇಶಿಸಲಾಗಿದೆ ಎಂದು ಪುರಸಭೆ ಅಧ್ಯಕ್ಷ ಎಸ್.ಎನ್. ಸತೀಶ್ ಹೇಳಿದರು.  
ಬುಧವಾರ ಪುರಭವನದಲ್ಲಿ ಫಲಾನುಭವಿಗಳಿಗೆ ಸಹಾಯಧನದ ಚೆಕ್ ವಿತರಿಸಿ ಮಾತನಾಡಿದ ಅವರು, ಪುರಸಭೆಯ 4 ಹಾಗೂ 8,9,10 ನೇ ವಾರ್ಡ್ನಲ್ಲಿ ಅತಿಹೆಚ್ಚು ಶೌಚಾಲಯವಿಲ್ಲದ ಮನೆಗಳಿದ್ದು ಈ ಬಾರಿಯ ರಾಜ್ಯ ಹಣಕಾಸು ಯೋಜನೆಯ 22.75 ಅನುಧಾನದಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸುವ ಕೆಲಸ ನಡೆಯುತ್ತಿದ್ದು ನಾಲ್ಕನೆ ವಾರ್ಡ್ನಲ್ಲಿ 42 ಮನೆಗಳು ಶೌಚಾಲಯವಿಲ್ಲದಿರುವುದು ಬೆಳಕಿಗೆ ಬಂದಿದೆ.
ಇದರಲ್ಲಿ 21 ಜನರಿಗೆ ಶೌಚಾಲಯ ನಿರ್ಮಿಸಿಕೊಳ್ಳಲು ಮೊದಲ ಕಂತಿನಲ್ಲಿ 6 ಸಾವಿರ ರು. ಸಹಾಯಧನ ನೀಡಲಾಗುತ್ತಿದ್ದು ಒಟ್ಟು 20 ಸಾವಿರ ರು. ಸಹಾಯಧನ ನೀಡಲಾಗುವುದು ಎಂದರು. ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಮುಖೇಶ್,ಮುಖ್ಯಾಧಿಕಾರಿ ವೀರಭದ್ರಯ್ಯ ಸದಸ್ಯರಾದ ಉಮೇಶ್, ಸಂತೋಷ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement