ಚೆಸ್ನಲ್ಲಿ ಅಜಿತ್ಗೆ ಪ್ರಶಸ್ತಿ
ಮೈಸೂರು: ಎಸ್ಕೆಆರ್ ಫೌಂಡೇಷನ್ ನಡೆಸಿದ ಎಸ್ಕೆಆರ್ ಸ್ಮಾರಕ ಜಿಲ್ಲಾ ಮುಕ್ತ ಚದುರಂಗ ಪಂದ್ಯಾವಳಿಯಲ್ಲಿ ರಂಗರಾವ್ ಆ್ಯಂಡ್ ಸನ್ಸ್ ಸಂಸ್ಥೆಯ ಎಂ.ಪಿ. ಅಜಿತ್ ಪ್ರಶಸ್ತಿ ಗೆದ್ದರು. ಮೈಸೂರು ವೃತ್ತಿಪರ ಚದುರಂಗ ಅಕಾಡೆಮಿಯಿಂದ ಭಾಗವಹಿಸಿದ್ದ ಅಜಿತ್ ಸಮೀಪದ ಸ್ಪರ್ಧಿಗಳಾದ ಎಲ್. ವಿವೇಕಾನಂದ ಹಾಗೂ ಕೇದಾರ್ ಉಮೇಶ್ ವಾಜ್ ಅವರಿಗೆ ಪೈಪೋಟಿ ನೀಡಿದರು. ಏಳು ಸುತ್ತುಗಳಲ್ಲಿಯೂ 5.5 ಅಂಕ ಗಳಿಸಿದ ಅಜಿತ್ಗೆ ಟೈ ಬ್ರೇಕರ್ನಲ್ಲಿ ಗಳಿಸಿದ್ದ 32 ಅಂಕ ಜಯ ಗಳಿಸಲು ಮುಖ್ಯ ಕಾರಣವಾಯಿತು.