ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಬಸ್ ಚಾಲಕನ ಸಮಯ ಪ್ರಜ್ಞೆ - ತಪ್ಪಿದ ಅನಾಹುತ

Rashmi Kasaragodu
Updated On : 3 Sept 2013, 12:23 pm

ಹಾಸನ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಅನಾಹುತ ಸೋಮವಾರ ತಪ್ಪಿ, ಪ್ರಯಾಣಿಕರು ಅಪಾಯದಿಂದ ಪಾರಾದ ಘಟನೆ ನಗರದಲ್ಲಿ ನಡೆದಿದೆ. ಅರಸೀಕೆರೆಯಿಂದ ನಗರಕ್ಕೆ ಬಂದ ಬಸ್ ಹಾಸನದ ಹೊಸ ಬಸ್ ನಿಲ್ದಾಣಕ್ಕೆ ತೆರಳುವಾಗ ಎನ್.ಆರ್.ವೃತ್ತದ ಬಳಿ ಬಸ್ ಸ್ಟೇರಿಂಗ್ನಲ್ಲಿ ತೊಂದರೆ ಉಂಟಾಗಿ ನಿಯಂತ್ರಣ ತಪ್ಪಿದೆ. ಆಗ ಚಾಲಕ ಸಿದ್ದೇಗೌಡರು ಸಮಯ ಪ್ರಜ್ಞೆಯಿಂದ ಬಸ್ನ್ನು ಖಾಲಿ ಜಾಗದಲ್ಲಿ ತೆಗೆದು ಕೊಂಡು ನಿಲ್ಲಿಸಿದ್ದಾರೆ. ಪ್ರಯಾಣಿಕರಿಂದ ತುಂಬಿದ್ದ ಬಸ್ಗೆ ಯಾವುದೇ ಅಪಘಾತವಾಗದಂತೆ ಚಾಲಕ ಬಸ್ ನಿಯಂತ್ರಿಸುವಲ್ಲಿ ಯಶಸ್ವಿಯಾಗಿ ಆಗಬಹುದಾಗಿದ್ದ ಭಾರಿ ಅನಾಹುತ ತಪ್ಪಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement