ಕ್ರೀಡೆಯಲ್ಲಿ ಸ್ಪರ್ಧೆ ಮುಖ್ಯ'
ಹೊಳೆನರಸೀಪುರ: ಗ್ರಾಮೀಣ ಕ್ರೀಡಾಕೂಟದಲ್ಲಿ ಭಾಗವಹಿಸಿದ ಎಲ್ಲ ಮಕ್ಕಳು ಸಹ ಬಹುಮಾನ ಗಳಿಸಲು ಸಾಧ್ಯವಿಲ್ಲ, ಹಾಗೆಂದು ಭಾಗವಹಿಸುವುದನ್ನು ಕೈಬಿಡುವುದು ಸರಿಯಲ್ಲ. ಈ ಬಾರಿ ಗೆಲವು ಇಲ್ಲದಿದ್ದರೂ ಮುಂದಿನ ಗ್ರಾಮೀಣ ಕೂಟದಲ್ಲಿ ಭಾಗವಹಿಸಿ ಗೆಲವು ಸಾಧಿಸುವಂತೆ ಕ್ರೀಡಾಪಟುಗಳಿಗೆ ಶಾಸಕ ಎಚ್.ಡಿ. ರೇವಣ್ಣ ಕಿವಿಮಾತು ಹೇಳಿದರು.
ಪಟ್ಟಣದ ಹೇಮಾವತಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಯುವ ಕ್ರೀಡಾ ಔರ್ಖೇಲ್ ಅಭಿಯಾನ್ ಗ್ರಾಮೀಣ ಕ್ರೀಡಾಕೂಟ 2013-14ನೇ ಸಾಲಿನ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೂ ಶುಭಕೋರಿದರು.
ಕ್ರೀಡಾಧಿಕಾರಿ ಎಸ್.ಎನ್.ನಾಗರಾಜು ಸೇರಿದಂತೆ ಗ್ರಾಮೀಣ ಪ್ರದೇಶಗಳಿಂದ ಆಗಮಿಸಿದ್ದ ಕ್ರೀಡಾ ಪಟುಗಳು ಮತ್ತು ದೈಹಿಕ ಶಿಕ್ಷಕರು ಮತ್ತತಿರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.