ಬಾಲ ಸಂಜೀವಿನಿ; ಮಕ್ಕಳಿಗೆ ಚಿಕಿತ್ಸೆ
ಹಾಸನ: ಅಪೌಷ್ಟಿಕ ಮಕ್ಕಳ ವೈದ್ಯಕೀಯ ವೆಚ್ಚ ಬಾಲಸಂಜೀವಿನಿ ಯೋಜನೆಯಡಿ ತೀವ್ರ ಅಪೌಷ್ಟಿಕ ಮಕ್ಕಳ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲೆಯಲ್ಲಿ ಬಾಲ ಸಂಜೀವಿನಿ ಯೋಜನೆ ಆರಂಭಿಸಿದ್ದು, ಈ ನಿಟ್ಟಿನಲ್ಲಿ ನಗರದ ಸಿಎಸ್ಐ ಮೆಮೋರಿಯಲ್ ಆಸ್ಪತ್ರೆಯು ಈ ಯೋಜನೆಗಾಗಿ ಸರ್ಕಾರದಿಂದ ಅಂಗೀಕೃತವಾಗಿದೆ. ಈ ನಿಟ್ಟಿನಲ್ಲಿ ಪೋಷಕರು, ಪಾಲಕರು ತೀವ್ರ ಅಪೌಷ್ಟಿಕತೆವುಳ್ಳ 6 ವರ್ಷದೊಳಗಿನ ಮಕ್ಕಳು, ಬಿ.ಪಿಎಲ್ ಕುಟುಂಬಕ್ಕೆ ಸೇರಿದ ಅಂಗನವಾಡಿ ಮಕ್ಕಳನ್ನು ಸಿಎಸ್ಐ. ಮೆಮೋರಿಯಲ್ ಆಸ್ಪತ್ರೆ ಹಾಸನ, ಇಲ್ಲಿಗೆ ಅಂಗನವಾಡಿ ಕಾರ್ಯಕರ್ತೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಶಿಫಾರಸ್ಸಿನೊಂದಿಗೆ ದಾಖಲಿಸಬಹುದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ. ಮಾಹಿತಿಗೆ ನಿರ್ದೇಶಕರು, ಸಿಎಸ್ಐ ಮೆಮೋರಿಯಲ್ ಆಸ್ಪತ್ರೆ, ಹಾಗೂ ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, 9ನೇ ಅಡ್ಡರಸ್ತೆ, ಆರ್.ಪುರಂ. ಹಾಸನ. ದೂ-08172-267218.