ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸಂಘಟನೆ ಹೆಸರಲ್ಲಿ ಅಕ್ರಮ ಪ್ರತಿಭಟನೆ: ಆರೋಪ

Rashmi Kasaragodu
Updated On : 4 Sept 2013, 12:39 pm

ಬೇಲೂರು: ಪ್ರಗತಿಪರ ಸಂಘಟನೆ ಹೆಸರಿನಲ್ಲಿ ರಾಜ್ಯ ಯುವ ಜನತಾದಳ ಮುಖಂಡ ಕೆ.ಸುದರ್ಶನ್ ಕಾನೂನು ಬಾಹಿರ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ವಿವಿಧ ಸಂಘಟನೆಗಳ ಪ್ರಮುಖರು ಆರೋಪಿಸಿದ್ದಾರೆ.  
ಈ ಸಂಬಂಧ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿವಿಧ ಸಂಘಟನೆಗಳ ಪ್ರಮುಖರು, ತಾಲೂಕಿನಾದ್ಯಂತ ನೂರಾರು ಸಂಘ-ಸಂಸ್ಥೆಗಳು ಇದ್ದು, ಇವುಗಳು ಯಾವುದೇ ಪ್ರಗತಿಪರ ಸಂಘಟನೆ ಅಧ್ಯಕ್ಷರು ಎಂದು ರಚನೆ ಮಾಡಿಕೊಂಡಿಲ್ಲ. ಅದರೆ, ಸುದರ್ಶನ್ ತಾವು  ಪ್ರಗತಿಪರ ಸಂಘಟನೆ ಅಧ್ಯಕ್ಷ ಸ್ವಯಂ ಘೋಷಣೆ ಮಡಿಕೊಳ್ಳುವ ಮೂಲಕ  ತಮ್ಮ ಸ್ವಾರ್ಥಕ್ಕಾಗಿ ದಿನ ನಿತ್ಯ ಒಂದಿಲ್ಲ ಒಂದು ಪ್ರತಿಭಟನೆ ಮಾಡುವುದರ ಮೂಲಕ ಇತರೆ ಸಂಘ-ಸಂಸ್ಥೆಗಳನ್ನು ಹಾದಿ ತಪ್ಪಿಸುತ್ತಿದ್ದಾರೆ. ಏಕಾಪಕ್ಷೀಯವಾಗಿ ಕೇವಲ ಎರಡು ಸಂಘಟನೆಗಳನ್ನು ಮುಂದಿಟ್ಟುಕೊಂಡು ದಿನ ಬೆಳಗಾದರೆ ಪ್ರತಿಭಟನೆ ನೆಪದಲ್ಲಿ ಇತರೆ ಪಕ್ಷಗಳ ಮುಖಂಡರುಗಳನ್ನು ತೇಜೋವಧೆ ಮಾಡುವುದರ ಮೂಲಕ ರಾಜಕೀಯ ಪ್ರೇರಿತರಾಗಿ ಸಂಘಗಳ ಹೆಸರುಗಳನ್ನು ದುರ್ಬಳಕೆ ಮಾಡುತ್ತಿದ್ದಾರೆ ಎಂದು ದೂರಿದರು. ಯಗಚಿ ಜಲಾಶಯಕ್ಕೆ ಬಾಗಿನ ಬಿಡುವ ದಿನ ಕರ್ನಾಟಕ ಕಾವಲುಪಡೆ ಅಧ್ಯಕ್ಷರು ಹೊರತು ಮತ್ತಾರಿಗೂ ತಿಳಿಸಿಲ್ಲ. ತಮಗಿಷ್ಟ ಬಂದವರಿಗೆ ತಿಳಿಸಿದ್ದಾರೆ. ಇನ್ನುಮುಂದೆ ಪ್ರಗತಿಪರ ಸಂಘಟನೆ ಹೆಸರು ಕೈಬಿಟ್ಟು ನಮ್ಮೊಟ್ಟಿಗೆ ಹೋರಾಟಕ್ಕೆ ಬಂದರೆ ಅಭ್ಯಂತರವಿಲ್ಲ ಪ್ರಗತಿಪರ ಹೆಸರಿನಲ್ಲಿ ಬಂದರೆ ಯಾವುದೇ ಕಾರಣಕ್ಕೂ ಸೇರಿಸಿಕೊಳ್ಳುವುದಿಲ್ಲ ಎಂದರು. ಕರವೇ ಅಧ್ಯಕ್ಷ ಚಂದ್ರಶೇಖರ್, ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಬಿ.ಅರ್.ತೀರ್ಥಂಕರ್, ಕನ್ನ ಕಾವಲು ಪಡೆ ತಾಲೂಕು ಅಧ್ಯಕ್ಷ ಪೈಂಟರ್ ರವಿ,  ತಾಲೂ ಕುಮಾದಿಗ ದಂಡೋರ ಸಮಿತಿ ಅಧ್ಯಕ್ಷ ದಾಸಪ್ಪ, ಕನ್ನಡ ಸೇನೆ ಅಧ್ಯಕ್ಷ ಪ್ರಭಾಕರ್, ಸಂಗೊಳ್ಳಿರಾಯಣ್ಣ ಸೇನೆ ಅಧ್ಯಕ್ಷ ಲೋಕೇಶ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement