ಇಂದು ಶಿಕ್ಷಕರ ದಿನಾಚರಣೆ
ಹೊಳೆನರಸೀಪುರ: ತಾಲೂಕು ಪಂಚಾಯ್ತಿ, ಪುರಸಭೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ಸೆ.5ರಂದು ಇಲ್ಲಿನ ಶಿಕ್ಷಕರ ಭವನದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನಾಚರಣೆ ಹಾಗೂ ಶಿಕ್ಷಕರ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಯೋಗೇಶ್ ಹಾಗೂ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಕೆ. ಮಂಜುನಾಥ್ ತಿಳಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಎಚ್.ಡಿ.ರೇವಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಅರಕಲಗೂಡು ಶಾಸಕ ಎ.ಮಂಜು ಹಾಗೂ ತಾಲೂಕಿನ ಎಲ್ಲಾ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ನಾಳೆ ನಗರಸಭೆ ಅಧ್ಯಕ್ಷ ಚುನಾವಣೆ
ಹಾಸನ: ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ಸೆ. 6 ರಂರು ಬೆಳಗ್ಗೆ 9 ರಿಂದ ನಗರಸಭೆಯ ರಾಷ್ಟ್ರಕವಿ ಕುವೆಂಪು ಸಭಾಂಗಣದಲ್ಲಿ ಉಪವಿಭಾಗಾಧಿಕಾರಿ ಹಾಗೂ ಚುನಾವಣಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆಸಲಾಗುವುದು ಎಂದು ಪೌರಾಯುಕ್ತ ನಾಗಭೂಷಣ್ ತಿಳಿಸಿದ್ದಾರೆ.
ಜಲಾಶಯಗಳ ನೀರಿನ ಮಟ್ಟ
ಹಾಸನ: ಹೇಮಾವತಿ ಜಲಾಶಯಕ್ಕೆ ಬುಧವಾರ 4311 ಕ್ಯುಸೆಕ್ ನೀರು ಹರಿದು ಬಂದಿದೆ. ಗರಿಷ್ಟ 2922 ಅಡಿಯಿದ್ದು, ಪ್ರಸ್ತುತ 2921.43 ಅಡಿ ನೀರಿದೆ. ಜಲಾಶಯದಿಂದ ನದಿಗೆ 125 ಕ್ಯುಸೆಕ್ ನಾಲೆಗೆ 4300 ಕ್ಯುಸೆಕ್ ನೀರು ಬಿಡಲಾಗುತ್ತಿದೆ. ಜಲಾಶಯದಲ್ಲಿ 36.552 ಟಿಎಂಸಿ ನೀರು ಸಂಗ್ರಹವಾಗಿದೆ.
ತಾಲೂಕುವಾರು ವಿವರ: ಆಲೂರು 3, ಅರಕಲಗೂಡು 6, ಅರಸೀಕೆರೆ 21.6,ಬೇಲೂರು 0.8, ಚನ್ನರಾಯಪಟ್ಟಣ 4.2,ಹೊಳೆನರಸೀಪುರ 3.5, ಸಕಲೇಶಪುರ 3.2 ಮಿ.ಮೀ ಮಳೆಯಾಗಿದೆ.
ಹೋಬಳಿವಾರು ಮಳೆ ವಿವರ: ಆಲೂರು ಕಸಬ 3, ಕುಂದೂರು 1.8, ಅರಕಲಗೂಡು 6, ಮಲ್ಲಿಪಟ್ಟಣ 18,ರಾಮನಾಥಪುರ4.5,ಕೊಣನೂರು 9, ದೊಡ್ಡಮಗ್ಗೆ 1.4, ದೊಡ್ಡಬೆಮ್ಮತ್ತಿ 4.2, ಅರಸೀಕೆರೆ 21.6, ಬಾಣಾವರ 70, ಗಂಡಸಿ30.2, ಕಣಕಟ್ಟೆ 12.6, ಯಳವಾರೆ 2, ಬೇಲೂರು 0.8, ಹಗರೆ1.6,ಬಿಕ್ಕೋಡು2.8,ಗೆಂಡೆಹಳ್ಳಿ 2.2,ಅರೆಹಳ್ಳಿ6.2, ಚನ್ನರಾಯಪಟ್ಟಣ 4.2, ಉದಯಪುರ 1.6, ಬಾಗೂರು4, ನುಗ್ಗೆಹಳ್ಳಿ 3.4, ಹಿರಿಸಾವೆ 2.4,ಶ್ರವಣಬೆಳಗೊಳ 5.8, ಹೊಳೆನರಸೀಪುರ 3.5,ಹಳೇಕೋಟೆ 5.8,ಹಳ್ಳಿಮೈಸೂರು 4.6,ಸಕಲೇಶಪುರ 3.2, ಬಾಳ್ಳುಪೇಟೆ 2.1,ಮಾರನಹಳ್ಳಿ14,ಶುಕ್ರವಾರ ಸಂತೆ3.2,ಹೊಸುರು1.6,ಹಾನುಬಾಳು 9.6,ಹೆತ್ತೂರು 4.4 ಮಿ.ಮೀ. ಮಳೆಯಾಗಿದೆ.