ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಜೈವಿಕ ಇಂಧನ ಸಸಿಗಳ ಮಹತ್ವ: ತರಬೇತಿ

Rashmi Kasaragodu
Updated On : 5 Sept 2013, 12:03 pm

ಹಾಸನ: ಕೃಷಿ ವಿಜ್ಞಾನ ಕೇಂದ್ರ ಕಂದಲಿ ವತಿಯಿಂದ ಚನ್ನರಾಯಪಟ್ಟಣ ತಾಲೂಕಿನ ಬಿ. ಚೌಡೇನಹಳ್ಳಿ ಗ್ರಾಮದ ರೈತರಿಗೆ ಸಮಗ್ರ ಕೃಷಿ ಪದ್ಧತಿಯಲ್ಲಿ ಜೈವಿಕ ಇಂಧನ ಸಸಿಗಳ ಅಳವಡಿಕೆ ಬಗ್ಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
  ಕೇಂದ್ರದ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ.ಬಿ.ಎಸ್.ಬಸವರಾಜು,  ರೈತರು ಬಂಡವಾಳವಿಲ್ಲದೆ ಅಧಿಕ ಆದಾಯ ಪಡೆಯಲು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳುವುದು ಅತ್ಯಾವಶ್ಯಕ ಎಂದರು.
 ಹಾಗೂ ರೈತರು ವಿವಿಧ ಬೆಳೆ ಗಳಲ್ಲಿ ಹೊಸ ತಳಿಗಳನ್ನು ಬಳಕೆ ಮಾಡುವುದರ ಜೊತೆಗೆ ಕೃಷಿಯಲ್ಲಿ ಜೈವಿಕ ಇಂಧನ ಸಸಿಗಳಾದ ಕಸಿ ಮಾಡಿದ ಹೊಂಗೆ, ಬೇವು, ಹಿಪ್ಪೆ ಹಾಗೂ ಸಿಮರೂಬ ಸಸಿಗಳನ್ನು ಬದುಗಳಲ್ಲಿ, ಬಂಜರು ಭೂಮಿಯಲ್ಲಿ ಹಾಗೂ ರಸ್ತೆ ಬದುಗಳಲ್ಲಿ ನೆಟ್ಟು ಹೆಚ್ಚಿನ ಆದಾಯ ಪಡೆಯಲು ಸಲಹೆ ನೀಡಿದರು.
  ವಿಜ್ಞಾನಿ ಡಾ.ಎಚ್.ಬಿ.ರಘು ಮುಂದಿನ ದಿನಗಳಲ್ಲಿ ರೈತರು ಉತ್ಪಾದಿಸಿದ ಎಣ್ಣೆಬೀಜಗಳನ್ನು ಜೈವಿಕ ಇಂಧನ ಉದ್ಯಾನದಲ್ಲೇ ಉತ್ತಮ ಬೆಲೆಗೆ ತೆಗೆದು ಕೊಳ್ಳಲಾಗುವುದು ಎಂದು ತಿಳಿಸಿ, ವಿತರಿಸಿದ ಸಸಿಗಳ ಉಪಯೋಗ ಗಳನ್ನು ವಿವರಿಸಿದರು.   ವಿಜ್ಞಾನಿ ಡಾ.ಎ.ಸಿ.ಗಿರೀಶ್ ಈಗಾಗಲೇ ಸಮಗ್ರ ಕೃಷಿ ಪದ್ಧತಿ ಯೋಜನೆಯಡಿ 14 ಹಳ್ಳಿಗಳಿಗೆ 17 ಸಾವಿರ ಜೈವಿಕ ಸಸಿ ವಿತರಿಸಿರುವುದು ಹೆಮ್ಮೆ ಸಂಗತಿ ಎಂದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement