ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಗೆ ಚಾಲನೆ

Rashmi Kasaragodu
Updated On : 5 Sept 2013, 12:01 pm

ರಾಮನಾಥಪುರ: ಸಮೀಪದ ಬೆಟ್ಟಗಳಲೆ ಗ್ರಾಮದಲ್ಲಿ ಶಾಸಕ ಎ.ಮಂಜು ಅವರು ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆ ಕಾಮಗಾರಿಗೆ ಗುದ್ದಲಿ ಪೂಜೆ ಸಲ್ಲಿಸುವುದರ ಮೂಲಕ ಚಾಲನೆ ನೀಡಿದರು.
ಈ ಯೋಜನೆಯಡಿ ಬೆಟ್ಟಗಳಲೆ ಗ್ರಾಮ, ಕಾರ್ಗಲ್, ಬನ್ನೂರು ಗ್ರಾಮಗಳಲ್ಲಿ ಸಿಮೆಂಟ್ರಸ್ತೆ ಹಾಗು ಚರಂಡಿ ಮಂಜೂರಾಗಿದ್ದು ರಸ್ತೆ ಉದ್ದಳತೆ 1.960 ಮತ್ತು 2.660 ಹಾಗೂ ಮಂಜೂರಾದ ರಸ್ತೆಯ ಅಂದಾಜು ಮೊತ್ತ 66.18 ಲಕ್ಷ ರು. ಮತ್ತು 96.80 ಲಕ್ಷ ರು. ವೆಚ್ಚದ್ದಾಗಿದೆ. ಆದಷ್ಟು ಬೇಗ ಅಚ್ಚುಕಟ್ಟಾಗಿ ಕಾಮಗಾರಿ ಪೂರೈಸುವಂತೆ ಗುತ್ತಿಗೆದಾರರಿಗೆ ಶಾಸಕರು ತಿಳಿಸಿದರು.
ಸ್ವಚ್ಚತೆ ಮುಖ್ಯ. ಇದರಿಂದ ಆರೋಗ್ಯ ಕಾಪಾಡಿಕೊಳ್ಳಲು ಸಹಾಯಕವಾಗುತ್ತದೆ. ಇಂದಿಗೂ ಎಷ್ಟೋ ಹಳ್ಳಿಗಳಲ್ಲಿ ಅಸ್ವಚ್ಚತೆ ಎದ್ದು ಕಾಣುತ್ತಿದೆ. ಇದಕ್ಕೆ ಕಾರಣ ಅನರಕ್ಷತೆ ಹಾಗೂ ಪಂಚಾಯ್ತಿಯವರು ಸೂಕ್ತ ತಿಳಿವಳಿಕೆ ಕೊರತೆ ಸಹ ಕಾರಣ ಎಂದರು. ಮಹಾತ್ಮ ಗಾಂಧೀಜಿಯವರು ಹಳ್ಳಿಗಳು ಯಾವಾಗ ಉದ್ಧಾರವಾಗುತ್ತದೆಯೊ ಅಂದೇ ನಮ್ಮ ದೇಶ ಉದ್ಧಾರವಾದಂತೆ ಎಂಬ ಮಾತು ಅಕ್ಷರಶ: ನಿಜವಾಗುತ್ತದೆ ಎಂದು ಅಭಿಪ್ರಾಯಿಸಿದರು.
ಮೂಲಭೂತ ಸೌಲಭ್ಯ ಸಾರ್ವಜನಿಕರಿಗೆ ದೊರೆತಾಗ ಮಾತ್ರ ಪ್ರಜಾಪ್ರಭುತ್ವಕ್ಕೆ ನಿಜವಾದ ಅರ್ಥ ಬರುತ್ತದೆ.  ತಾಲೂಕಿನ ಪ್ರತೀ ರಸ್ತೆಯನ್ನು ಅಭಿವೃದ್ಧಿ ಪಡಿಸುವುದರೊಂದಿಗೆ ಪಕ್ಷಾತೀತವಾಗಿ ತಾಲೂಕಿನ ಪ್ರಗತಿಗಾಗಿ ಉತ್ತಮ ಕೆಲಸಗಳನ್ನು ಮಾಡಿಸುವುದರೊಂದಿಗೆ ಜಿಲ್ಲೆಯಲ್ಲಿಯೇ ಉತ್ತಮ ತಾಲೂಕನ್ನಾಗಿಸುವುದೆ ನಮ್ಮ ಮುಖ್ಯ ಗುರಿ ಎಂದು ತಿಳಿಸಿದರು.
ಚೌಡೇಗೌಡ ಸ್ವಾಗತಿಸಿದರು. ತಾಪಂ ಅಧ್ಯಕ್ಷೆ ಕಾಮಾಕ್ಷಮ್ಮ, ತಾ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಬ್ಬಳಿಗೆರೆ ಬೈರೇಗೌಡರು, ಎಇಇ ನಾಗರಾಜು, ಎಇ ವರದರಾಜು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement