ಮನೆಯಲ್ಲಿ 200 ಗ್ರಾಂ ಚಿನ್ನ ಕಳವು
ರಾಮನಾಥಪುರ: ಸಮೀಪದ ಕಾಳೇನಹಳ್ಳಿ ವ್ಯಾಪ್ತಿಗೆ ಬರುವ ಬಸವನಹಳ್ಳಿಕೊಪ್ಪಲು ನಿವಾಸಿ ಶ್ರೀನಿವಾಸ್ ಎಂಬುವರು ಕುಟುಂಬದವರೊಂದಿಗೆ ಹುಣಸೂರಿಗೆ ತೆರಳಿದ್ದು, ಮನೆಯಲ್ಲಿ ಯಾರು ಇಲ್ಲದಿರುವುದನ್ನು ಅರಿತ ಕಳ್ಳರು ಮನೆಯಲ್ಲಿ ಇಟ್ಟಿದ್ದ 200 ಗ್ರಾಂ ಚಿನ್ನ, 20 ಸಾವಿರ ನಗದು ಕಳವು ಮಾಡಿದ್ದಾರೆ. ಶ್ರೀನಿವಾಸ್ ಕೊಣನೂರು ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.