ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ರಕ್ತದಾನ: ಗ್ರಾಮೀಣರು ಮುಂದೆ ಬಾರದಿರುವುದು ವಿಪರ್ಯಾಸ'

Rashmi Kasaragodu
Updated On : 5 Sept 2013, 12:01 pm

ಕ.ಪ್ರ.ವಾರ್ತೆ   ಅರಸೀಕೆರೆ   ಸೆ. 4
ರಕ್ತದಾನದ ಬಗ್ಗೆ ಸಾಕಷ್ಟು ತಿಳಿವಳಿಕೆ ಇದ್ದರೂ, ರಕ್ತದಾನ ಮಾಡಲು ಗ್ರಾಮೀಣ ಪ್ರದೇಶದ ಜನರು ಮುಂದೆ ಬಾರದಿರುವುದು ವಿಪರ್ಯಾಸದ ಸಂಗತಿ ಎಂದು ಕಣಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಯೋಗಾಲಯ ತಂತ್ರಜ್ಞ ಹಾಗೂ ತಾಲೂಕು ಕಸಾಪ ಮಾಜಿ ಅಧ್ಯಕ್ಷ ಬಿ.ಪರಮೇಶ್ ಹೇಳಿದರು.
ಕಣಕಟ್ಟೆಯ ವಿದ್ಯಾರಣ್ಯ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಇಡೀ ಜಗತ್ತಿನಲ್ಲಿ ಅತೀ ಹೆಚ್ಚು ಯುವಕರನ್ನು ಹೊಂದಿರುವ ಭಾರತ ಆರೋಗ್ಯವಂತ ದೇಶ ಕಟ್ಟುವ ಕಾರ್ಯದಲ್ಲಿ ಕೈಜೋಡಿಸಬೇಕಾದ ಅವಶ್ಯಕತೆಯಿದೆ. ಪ್ರತಿ ಗ್ರಾಮದಲ್ಲಿಯೂ ಯುವಕರು ರಕ್ತಗುಂಪು ಪರೀಕ್ಷಿಸಿ ಸ್ವಯಂಪ್ರೇರಿತ ರಕ್ತದಾನಿಗಳ ಸಂಘ ಮಾಡಿಕೊಂಡು ಅದರ ಅವಶ್ಯಕತೆ ನೀಗಿಸಿಕೊಳ್ಳವ ಅನಿವಾರ್ಯತೆ ಇದೆ ಎಂದರು.
ಯುವಕರಲ್ಲಿ ಮೌಲ್ಯ ಕುಸಿಯುತ್ತಿದ್ದು ಮಾನವೀಯ ಮೌಲ್ಯ ಬಳಸಿಕೊಳ್ಳುವ ಚಾರಿತ್ರ್ಯ ನಿರ್ಮಾಣ ಹಾಗೂ ನೊಂದವರ ದಾರಿದೀಪವಾಗುವ ಮನಸ್ಸು ಯುವಕರಿಗೆ ಬರಬೇಕಾಗಿದೆ. ಹಿರಿಯರ ಜೀವನ ಚರಿತ್ರೆ ಓದುವ ಮೂಲಕ ಅದನ್ನು ಅಳವಡಿಸಿಕೊಳ್ಳುವ ಮುಖಾಂತರ ರಾಷ್ಟ್ರ ನಿರ್ಮಾಣದಲ್ಲಿ ಕೈಜೋಡಿಸಬೇಕು. ಗ್ರಾಮೀಣ ಆರೋಗ್ಯವಂತರ ಭಾರತ ಗಾಂಧೀಜಿಯವರ ಕನಸು ಮೌಢ್ಯತೆ ತೊಲಗಿಸಿ ರಕ್ತದಾನದಂತಹ ಮಹತ್ತರ ಕಾರ್ಯಗಳಿಗೆ ಸಹಕಾರಿಯಾಗಲು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ವಿದ್ಯಾರಣ್ಯ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಶಶಿಕುಮಾರ್ ಮಾತನಾಡಿ, ರಕ್ತವು ಅತ್ಯಂತ ಅಮೂಲ್ಯವಾಗಿದ್ದು ರಕ್ತದಾನದ ಕಾರ್ಯದಲ್ಲಿ ಯುವಕರು ತೊಡಗಿಸಿಕೊಂಡರೆ ಆರೋಗ್ಯ ವೃದ್ಧಿಯಾಗುತ್ತದೆ ಎಂದರು.
 ವಿದ್ಯಾರಣ್ಯ ಐಟಿಐ ಪ್ರಾಂಶುಪಾಲ ಎಸ್.ಎಂ ಚೇತನ್ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಿರಿಯ ತರಬೇತಿ ಅಧಿಕಾರಿಗಳಾದ ರೇಣುಕ ಕುಮಾರ್, ಭವ್ಯ, ವಿದ್ಯಾಶ್ರೀ, ಮಧುಸೂದನ್, ಷಡಾಕ್ಷರಿ ಮುಂತಾದವರು ಇದ್ದರು. ನಂತರ ಎಲ್ಲಾ ವಿದ್ಯಾರ್ಥಿಗಳು ಅವಶ್ಯಕತೆ ಇದ್ದಾಗ ರಕ್ತದಾನ ಮಾಡುವುದಾಗಿ ಪ್ರತಿಜ್ಞೆ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement