ರಾಜ್ಯ ಸಂಸ್ಕೃತ ಭಾಷಣ ಸ್ಪರ್ಧೆಯಲ್ಲಿ ಪಾರಿತೋಷಕ
ಹಾಸನ: ಆದಿಚುಂಚನಗಿರಿಯಲ್ಲಿರುವ ಕಾಲಭೈರವೇಶ್ವರ ಸಂಸ್ಕೃತ ವೇದ ಸ್ನಾತಕ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಅಲಂಕಾರ ಬಿ.ಎ ವಿದ್ವನಧ್ಯಮಾ-3ನೇ ವರ್ಷದ ವಿದ್ಯಾರ್ಥಿ ಕೆ.ಡಿ.ಹನುಮಂತರಾಯ ಇತ್ತೀಚಿಗೆ ಶಿವಮೊಗ್ಗದ ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಯವರು ನಡೆಸಿದ ರಾಜ್ಯ ಮಟ್ಟದ ಸಂಸ್ಕೃತ ಭಾಷಣ ಸ್ಪರ್ಧೆಯಲ್ಲಿ ಸಂಸ್ಕೃತ ವಾಜ್ಞಯಿ ಸ್ತ್ರೀಣಾಂ ಸಂರಕ್ಷಣಾ ವ್ಯವಸ್ಥಾ ಎಂಬ ವಿಷಯದ ಬಗ್ಗೆ ವಿಚಾರ ಮಂಡಿಸಿ ಚತುರ್ಥ ಪಾರಿತೋಷಕ ಪಡೆದಿದ್ದಾರೆ. ಮತ್ತೊಬ್ಬ ವಿದ್ಯಾರ್ಥಿಯಾದ ಬಿ.ಎ ವಿದ್ವನಧ್ಯಮಾ-2ನೇ ತರಗತಿಯ ಪಿ.ಡಿ.ಗೋವಿಂದ ಸಮಾಧಾನಕರ ಬಹುಮಾನ ಪಡೆದಿದ್ದಾರೆ. ಪ್ರೊ.ಎಚ್.ಎಂ.ನರಸಿಂಹಮೂರ್ತಿ ಮಾರ್ಗದರ್ಶಕರಾಗಿದ್ದರೆಂದು ಸಂಸ್ಕೃತ ಕಾಲೇಜಿನ ಪ್ರಾಂಶುಪಾಲ ಪ್ರೊ.ಸಿ.ನಂಜುಂಡಯ್ಯ ತಿಳಿಸಿದ್ದಾರೆ.