ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ಸ್ವಯಂಕೃತ ಅಪರಾಧದಿಂದ ನೆಲೆ ಕಳೆದುಕೊಳ್ಳುತ್ತಿರುವ ಜೆಡಿಎಸ್'

Rashmi Kasaragodu
Updated On : 5 Sept 2013, 12:02 pm

ಕನ್ನಡಪ್ರಭ ವಾರ್ತೆ೤ ಸಕಲೇಶಪುರ೤ ಸೆ.4
ಸ್ವಯಂಕೃತ ಅಪರಾಧದಿಂದ ಜಿಲ್ಲೆಯಲ್ಲಿ ಜೆಡಿಎಸ್ ತನ್ನ ನೆಲೆ ಕಳೆದುಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಬಿ.ಶಿವರಾಂ ಹೇಳಿದರು. ಬುಧವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಜೆಡಿಎಸ್ ಈವರೆಗಿನ ಪ್ರವರ್ಧಮಾನ ಬೆಳವಣಿಗೆಗೆ ತೆರೆಮರೆಯಲ್ಲಿ ಅನ್ಯಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದೇ ನೆಲೆ ಕಳೆದುಕೊಳ್ಳುತ್ತಿರುವುದಕ್ಕೆ   ಕಾರಣವಾಗಿದೆ ಎಂದು ತಿಳಿಸಿದರು.
 ಆದರೆ ಇಂದು ರಾಜ್ಯದಲ್ಲಿ ಜೆಡಿಎಸ್ನ್ನು ದೂರವೇ ಇಟ್ಟು ಅಧಿಕಾರ ನಡೆಸುವಂತಹ ಮುಖ್ಯಮಂತ್ರಿ ಬಂದಿರುವುದರಿಂದ ರಾಜ್ಯದಲ್ಲಿ ದಿನಕಳೆದಂತೆ ಜೆಡಿಎಸ್ ನೆಲೆ ಕಳೆದುಕೊಳ್ಳಲಿದೆ. ಅಲ್ಲದೆ, ಜಿಲ್ಲೆಯಲ್ಲಿ ಕಾಂಗ್ರೆಸ್ ಬಲವೃದ್ಧಿಗೂ ಅನುಕೂಲವಾಗಲಿದೆ ಎಂದು ತಿಳಿಸಿದರು.
 ಇತ್ತೀಚೆಗೆ ನಡೆದ ಎರಡು ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಕುತಂತ್ರ ರಾಜಕಾರಣಕ್ಕೆ ಜನತೆ ತಕ್ಕ ಉತ್ತರ ನೀಡಿದ್ದು, ಅನ್ಯಪಕ್ಷಗಳನ್ನು ಒಡೆದು ಆಳುವ ಜೆಡಿಎಸ್ ಮುಖಂಡರ ನೀತಿಗೆ ಮುಂದಿನ ದಿನಗಳಲ್ಲೂ ಉತ್ತರ ಸಿಗಲಿದೆ ಎಂದು ನುಡಿದರು.
ಗುಂಪುಗಾರಿಕೆ ನಿಜ: ತಾಲೂಕು ಕಾಂಗ್ರೆಸ್ನಲ್ಲಿ ಗುಂಪುಗಾರಿಕೆ ಇರುವುದು ನಿಜ. ಆದರೆ, ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಗುಂಪುಗಾರಿಕೆ ಸಮನ ಮಾಡಲು ಪ್ರಯತ್ನ ನಡೆಸಲಾಗುವುದು ಎಂದರು.
ಕಾರ್ಯಕರ್ತರ ಅಸಮಾಧಾನ: ತಾಲೂಕು ಕಾಂಗ್ರೆಸ್ನಲ್ಲಿ ನಿಷ್ಠಾವಂತ ಕಾರ್ಯಕರ್ತರನ್ನು ಪರಿಗಣಿಸಲಾಗುತ್ತಿಲ್ಲ, ಚುನಾವಣೆಯ ವೇಳೆ ಅನ್ಯಪಕ್ಷಗಳಿಗೆ ಕೆಲಸಮಾಡಿದವರಿಗೆ ಪಕ್ಷದಲ್ಲಿ ಹುದ್ದೆಗಳನ್ನು ನೀಡಲಾಗಿದೆ. ಅಲ್ಲದೆ, ಹೊಸದಾಗಿ ಪಕ್ಷಕ್ಕೆ ಬಂದಿರುವವರಿಗೆ ಹೆಚ್ಚಿನ ಮನ್ನಣೆ ನೀಡಲಾಗುತ್ತಿದೆ. ಕಾಂಗ್ರೆಸ್ ಮುಖಂಡ ವೈ.ಪಿ ರಾಜೇಗೌಡ ಪಕ್ಷದ ಎಲ್ಲ ಕೆಲಸಗಳನ್ನು ನಿಯಂತ್ರಿಸುತ್ತಿದ್ದಾರೆ ಹಾಗೂ ತಾಲೂಕು ಪದಾಧಿಕಾರಿಗಳ ಸಮಿತಿ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿತು.
  ಜಿಲ್ಲಾಧ್ಯಕ್ಷ ಬಿ.ಶಿವರಾಂ ಮಾತನಾಡಿ, ಮುಂದಿನ ದಿನಗಳಲ್ಲಿ ಅಧಿಕಾರ ವಿಕೇಂದ್ರೀಕರಣ ಮಾಡುವ ಮೂಲಕ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರನ್ನು ಗೌರವಿಸಲಾಗುವುದು ಹಾಗೂ ಪಕ್ಷಕ್ಕೆ ಹೊಸದಾಗಿ ಕಾರ್ಯಕರ್ತರು ಹಾಗೂ ಮುಖಂಡರನ್ನು ಸೇರ್ಪಡೆ ಮಾಡಿಕೊಂಡಿರುವುದು ರಾಜ್ಯ ಕಾಂಗ್ರೆಸ್. ಅವರ, ಆದೇಶವನ್ನು ಪಾಲಿಸುವುದು ಮಾತ್ರ ನಮ್ಮ ಕರ್ತವ್ಯವಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement