ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಹಣ ಅಪಮೌಲ್ಯ ತಡೆಗೆ ದೇಶಿಯ ಉದ್ಯಮ ಬೆಳೆಸಿ

Rashmi Kasaragodu
Updated On : 5 Sept 2013, 12:03 pm

ಗಂಡಸಿ (ಅರಸೀಕೆರೆ ತಾ.): ವಿದೇಶಿ ಹೂಡಿಕೆಯ ಹಿಂತೆಗೆತ, ಭಾರತೀಯರ ಚಿನ್ನದ ವ್ಯಾಮೋಹದ ಹೆಚ್ಚಳದಿಂದಾಗಿ ಹೆಚ್ಚಾಗುತ್ತಿರುವ ಚಿನ್ನದ ಆಮದುಗಳ ಪರಿಣಾಮ ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ಹಿಂಜರಿಕೆಗೆ ಕಾರಣವಾಗಿದೆ ಎಂದು  ಉದಯಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ  ಸಹಾಯಕ ಪ್ರಾಧ್ಯಾಪಕ ಪ್ರೊ. ಗಂಗಾಧರಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
 ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗದಿಂದ ಏರ್ಪಡಿಸಿದ್ದ  ಹಣದ ಅಪಮೌಲ್ಯಿಕರಣ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
   ಭಾರತದಲ್ಲಿನ ಉದ್ಯಮದಲ್ಲಿನ ಕುಸಿತ ಚಿನ್ನದ ಬೆಲೆ ಯಲ್ಲಿ ಏರಿಕೆ, ತೈಲೋತ್ಪನ್ನಗಳ ಬೆಲೆ ಏರಿಕೆ, ದೈನಂದಿನ ವಸ್ತುಗಳ ಗಗನಚುಂಬಿ ಬೆಲೆ ಏರಿಕೆ ಇತ್ಯಾದಿ ಸಮಸ್ಯೆಗಳು ಉಂಟಾಗಿ  ಭಾರತದ ಆರ್ಥಿಕ ವ್ಯವಸ್ಥೆ ಹಿಂಜರಿತಕ್ಕೆ ಕಾರಣವಾಗಿದೆ.
  ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಭಾರತದಲ್ಲಿ ಸ್ವದೇಶಿ ಉದ್ಯಮ ಬೆಳೆಯಬೇಕು. ಸ್ವದೇಶಿ ವಸ್ತುಗಳಿಗೆ ಬೇಡಿಕೆ ಹೆಚ್ಚಾಗಬೇಕು. ಪಾಶ್ವಾತ್ಯೀಕರಣದ ಅಮಲು  ಕಡಿಮೆಯಾಗ
ಬೇಕೆಂದು ಹೇಳಿದರು.
  ಉಪನ್ಯಾಸಕ ನವೀನ್ ಲಿಂಗರಾಜು, ಮೋಹನ್ಕುಮಾರ್ ದೇವರಾಜಮೂರ್ತಿ, ಶರತ್ಕುಮಾರ್, ನಟರಾಜ್  ರವೀಶ್ ದೀಪಾ  ಉಪಸ್ಥಿತರಿದ್ದರು.
 ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ  ಬಸವರಾಜು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಚೈತ್ರ ಸ್ವಾಗತಿಸಿ ವಂದಿಸಿದರು. ಸೌಮ್ಯ  ನಿರೂಪಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement