ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅತಿವೃಷ್ಟಿಯಿಂದ ನಷ್ಟ: ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ

Mainashree
Updated On : 5 Sept 2013, 9:23 am

ಸಕಲೇಶಪುರ: ಅತಿವೃಷ್ಟಿಯಿಂದ ಹಾನಿಗೆ ಒಳಗಾಗಿರುವ ತೋಟದ ಬೆಳೆಗಳಿಗೆ ಸೂಕ್ತ ಪರಿಹಾರ ಘೋಷಿಸಬೇಕು ಎಂದು ರೈತ ಸಂಘದ ನೇತೃತ್ವದಲ್ಲಿ ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಆಗಸ್ಟ್ ತಿಂಗಳಿನಲ್ಲಿ ಸುರಿದ ಧಾರಾಕಾರ ಮಳೆಗೆ ತಾಲೂಕಿನ ವಾಣಿಜ್ಯ ಬೆಳೆಗಳಾದ ಕಾಫಿ, ಏಲಕ್ಕಿ ಹಾಗೂ ಕರಿಮೆಣಸಿನ ಬೆಳೆ ಶೇ.80 ರಷ್ಟು ಹಾನಿಗೊಂಡಿದೆ. ಇದರಿಂದಾಗಿ, ಈ ಬೆಳೆಗಳನ್ನೆ ನಂಬಿ ಜೀವನ ನಡೆಸುತ್ತಿದ್ದ ಬೆಳೆಗಾರರು ದಿಕ್ಕುಕಾಣದಾಗಿದ್ದಾರೆ.
ಆದರೆ, ಸರಕಾರ ಇದುವರೆಗೆ ಪರಿಹಾರ ನೀಡುವ ಬಗ್ಗೆ ಆಶ್ವಾಸನೆ ಅಥವಾ ಅರ್ಜಿಯನ್ನಾಗಲಿ ಸ್ವೀಕರಿಸದಿರುವುದು ಬೆಳೆಗಾರರ ಪಾಲಿಗೆ ಸರಕಾರ ಇದ್ದು ಇಲ್ಲದಂತಾಗಿದೆ. ಆದ್ದರಿಂದ, ಶೀಘ್ರವೆ ತೋಟಗಾರಿಕೆ ಬೆಳೆಗಳಿಗೆ ಪರಿಹಾರ ಘೋಷಿಸ ಬೇಕು ಮತ್ತು ಭತ್ತದ ಗದ್ದೆಗಳಿಗೆ ಈಗ ನೀಡುತ್ತಿರುವ ಪರಿಹಾರ ಅತಿಕಡಿಮೆಯಾಗಿದ್ದು ಗರಿಷ್ಟ ಹೆಕ್ಟರ್‌ಗೆ 25 ಸಾವಿರ ಪರಿಹಾರ ನೀಡ ಬೇಕು ಎಂದು ಆಗ್ರಹಿಸಿ ಉಪವಿಭಾಗಾಧಿಕಾರಿ ಶ್ರೀವಿದ್ಯಾ ಅವರಿಗೆ ಮನವಿ ನೀಡಿದರು. ಪ್ರತಿಭಟನೆ ನೇತೃತ್ವವನ್ನು ರೈತ ಸಂಘದ ತಾಲೂಕು ಅಧ್ಯಕ್ಷ ಸಾ.ಸು ವಿಶ್ವನಾಥ್, ಮುಖಂಡ ಕ್ಯಾನಹಳ್ಳಿ ರವಿ, ಹೆನ್ನಲಿ ಪಾಪಣ್ಣ, ತಮ್ಮಣ್ಣಗೌಡ, ಪ್ರಕಾಶ್ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement