ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ದುದ್ದ ರಸ್ತೆ ವೀಕ್ಷಿಸಿದ ಜಿಲ್ಲಾ ಉಸ್ತುವಾರಿ ಸಚಿವ

Mainashree
Updated On : 5 Sept 2013, 10:19 am

ಕನ್ನಡಪ್ರಭವಾರ್ತೆ೤ ಹಾಸನ೤ ಸೆ. 5
ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ದುದ್ದ ರಸ್ತೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ  ಗುರುವಾರ ಸಂಜೆ ವೀಕ್ಷಿಸಿದರು.
  ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು ನಂತರ ಹಾಳಾಗಿರುವ ರಸ್ತೆ ವೀಕ್ಷಿಸಿದರು. ಈ ಸಂದರ್ಭದಲ್ಲಿ  ಸಚಿವರ ಕಾರು ಮುಂದೆ ಸಾಗಲು ಹರಸಾಹಸ ಪಟ್ಟಿತು. ಅಲ್ಲಲ್ಲಿ ಬಿದ್ದಿರುವ ಗುಂಡಿಯನ್ನು ಸಚಿವರು ಸಾಕ್ಷಾತ್ ಪರಿಶೀಲಿಸಿದರು.
ನಂತರ ದುದ್ದ ಗ್ರಾಮಕ್ಕೆ ತೆರಳಿ ಕೆಲ ಸಮಯ ರೈತರೊಂದಿಗೆ ಚರ್ಚಿಸಿದರು.ರಸ್ತೆ ದುರಸ್ತಿ ಕಾಮಗಾರಿ  ನಡೆಸುವ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳಿಂದ ವಿವರ ಪಡೆದು ಶೀಘ್ರವೇ  ಸಮಸ್ಯೆ ಪರಿಹರಿಸಲಾಗುವುದು ಎಂದು ಹೇಳಿದರು.
 ಕಾಂಗ್ರೆಸ್ ಮುಖಂಡ ಬಿ.ಶಿವರಾಂ, ಎಸ್.ಎಂ.ಆನಂದ್, ಎಚ್.ಆರ್. ನಾರಾಯಣ್, ಎಚ್.ಕೆ.ಜವರೇಗೌಡ,  ಜಿಲ್ಲಾಧಿಕಾರಿ ಅನ್ಬುಕುಮಾರ್, ಜಿಲ್ಲಾ ಎಸ್ಪಿ ರವಿ ಡಿ. ಚನ್ನಣ್ಣನವರ್, ಕಾಂಗ್ರೆಸ್ ಕಾರ್ಯಕರ್ತರು ಇನ್ನೂ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement