ದೇವಾಲಯಗಳ ಸರಣಿ ಕಳವಿಗೆ ವಿಫಲ ಯತ್ನ
ಕನ್ನಡಪ್ರಭ ವಾರ್ತೆ ಸಕಲೇಶಪುರ ಸೆ. 5
ದೇವಸ್ಥಾನಗಳ ಸರಣಿ ಕಳ್ಳತನಕ್ಕಾಗಿ ವಿಫಲ ಯತ್ನ ನಡೆಸಿರುವ ಘಟನೆ ಪಟ್ಟಣದಲ್ಲಿ ಗುರುವಾರ ಮುಂಜಾನೆ ನಡೆದಿದೆ. ಪಟ್ಟಣದ ಆಂಜನೇಯ ಸ್ವಾಮಿ ದೇವಸ್ಥಾನದ ಬೀಗ ಮುರಿದು ಹುಂಡಿಯಲ್ಲಿದ್ದ ಹಣವನ್ನು ದೋಚಿರುವ ಕಳ್ಳರು, ಸಮೀಪದ ಸಕಲೇಶ್ವರ ದೇವಸ್ಥಾನದ ಬಾಗಿಲನ್ನು ಆಕ್ಸಿಜನ್ ಹಾಗೂ ಗ್ಯಾಸ್
ಸಿಲಿಂಡರ್ ಬಳಸಿ ಕಟಿಂಗ್ ಯಂತ್ರದ ಮೂಲಕ ಬಾಗಿಲು ಕೊರೆಯಲು ಪ್ರಯತ್ನ ನಡೆಸಿದ್ದಾರೆ. ಈ ವೇಳೆಗೆ ರಾತ್ರಿ ಬೀಟ್‌ನಲ್ಲಿ ಕಾರ್ಯಾಚರಣೆಯಲ್ಲಿದ್ದ ಪೋಲಿಸರು ಸ್ಥಳಕ್ಕೆ ಬರುತ್ತಿರುವ ಮಾಹಿತಿ ಅರಿತು ಕಳ್ಳತನ ನಡೆಸಲು ತಂದಿದ್ದ ಸಲಕರಣೆಗಳನ್ನು ಸ್ಥಳದಲ್ಲೆ ಬಿಟ್ಟು ಪರಾರಿಯಾಗಿದ್ದಾರೆ.
ಕಳ್ಳತನ ವಿಫಲಗೊಳಿಸಿದ ಗೂರ್ಖ: ರಾತ್ರಿ ಗೂರ್ಖ ದೇವಸ್ಥಾನದೊಳಗೆ ಕಳ್ಳತನ ನಡೆಯುಛಡತ್ತಿರುವುದನ್ನು ಅರಿತು ಪೊಲೀಸರಿಗೆ ವಿಷಯ ತಿಳಿಸಿದ್ದರಿಂದ ತಕ್ಷಣವೆ ಸ್ಥಳಕ್ಕಾಮಿಸಿದ ಪೊಲೀಸರನ್ನು ಕಂಡ ಕಳ್ಳರು ಪರಾರಿಯಾಗಿದ್ದಾರೆ.
ಕಳ್ಳರನ್ನು ಹಿಡಿದ ಪೊಲೀಸರು: ಸುತ್ತಲು ಬೃಹತ್ ಕಾಂಪೊಂಡ್ ಇರುವ ದೇವಸ್ಥಾನದೊಳಗಿನ ವಿದ್ಯುತ್ ಬಲ್ಪಗಳನ್ನು ಒಡೆದು ಕತ್ತಲಿನಲ್ಲಿ ಕಳ್ಳತನ ನಡೆಸುತ್ತಿದ್ದ ಕಳ್ಳರಿಗೆ ಪೋಲಿಸರು ಬಂದಿರುವ ವಿಚಾರ ತಿಳಿಯದೆ ಇದ್ದ ಪರಿಣಾಮ ದೇವಸ್ಥಾನದಿಂದ ತಪ್ಪಿಸಿಕೊಳ್ಳಲಾಗದೆ ಪೋಲಿಸರಿಗೆ ಶರಣಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಆದರೆ, ಯಾವುದೆ ಆರೋಪಿಗಳನ್ನು ಬಂಧಿಸಿಲ್ಲ ಎಂದು ಪೋಲಿಸರು ಸ್ವಷ್ಟಪಡಿಸಿದ್ದಾರೆ.