ಶಿಕ್ಷಕ ಜ್ಞಾನದ ಕಣಜವಾಗಿರಬೇಕು: ಪಿ.ಕೆ ರಾಜಶೇಖರ್
ಚನ್ನರಾಯಪಟ್ಟಣ: ಶಿಕ್ಷಕರು ಜ್ಞಾನವಂತನಾದರೆ ಮಾತ್ರ ಶಿಷ್ಯರಿಗೆ ಉತ್ತಮ ವಿದ್ಯೆ ನೀಡಲು ಸಾಧ್ಯ ಎಂದು ಜಾನಪದ ತಜ್ಞ ಪಿ.ಕೆ ರಾಜಶೇಖರ್ ತಿಳಿಸಿದರು.
ಪಟ್ಟಣದ ಗುರುಭವನದಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ ಶಿಕ್ಷಕರಾದವರು ಜ್ಞಾನದ ಕಣಜವಾಗಿರಬೇಕು. ತಮ್ಮ ಶಿಷ್ಯರು ಕೇಳುವ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುವ ಸಾಮರ್ಥ್ಯ ಹೊಂದಿರಬೇಕು ಎಂದು ತಿಳಿಸಿದರು.
ಗುರುಗಳು ತಮ್ಮ ವಿದ್ಯಾರ್ಥಿಗಳಿಗೆ ಕೇವಲ ಪಠ್ಯ ಪುಸ್ತಕದಲ್ಲಿನ ವಿಷಯಗಳನ್ನು ಬೋದಿಸಿದರೆ ಸಾಲದು ಅವರು ತಮ್ಮ ಶಿಷ್ಯಂದರಿಗೆ ಸಂಸ್ಕೃತಿ, ಸಾಮಾಜಿಕ ಪ್ರಜ್ಞೆ, ಬೌದ್ಧಿಕ ಮಟ್ಟವನ್ನು ಹೆಚ್ಚಿಸುವ ವಿಷಯಗಳನ್ನು ಬೋದಿಸಿ ಅವಗಳನ್ನು ಅಳವಡಿಸಿಕೊಳ್ಳುವ ಮನಸ್ಸನ್ನು ಮೂಡಿಸುವತ್ತಾ ಮುಂದಾಗಬೇಕು ಎಂದು ತಿಳಿಸಿದರು. ಮಾಜಿ ಸಚಿವ ಎಚ್.ಡಿ ರೇವಣ್ಣ ಮಾತನಾಡಿ ದೇಶಕ್ಕೆ ಉತ್ತಮ ಪ್ರಜೆಗಳನ್ನು ಸೃಷ್ಟಿಸುವ ಶಿಕ್ಷಕರುಗಳಿಗೆ ಸರ್ಕಾರ ನೀಡುತ್ತಿರುವ ಸೌಲಭ್ಯಗಳ ಕೊರತೆಯಿದ್ದು, ಅವರಿಗೆ ಮೂಲಭೂತ ಸೌಲಭ್ಯಗಳನ್ನು ನೀಡುವಲ್ಲಿ ಸರ್ಕಾರ ಮುಂದಾಗಬೇಕು. ಉತ್ತಮ ಶಿಕ್ಷಕರಾಗಿ ಆಯ್ಕೆಯಾದವರಿಗೆ ಆರ್ಥಿಕ ಸಹಾಯವನ್ನು ಮಾಡುವತ್ತಾ ಮುಂದಾಗಬೇಕು ಎಂದು ತಿಳಿಸಿದರು. ತಾಲೂಕು ಪಂಚಾಯಿತಿ ಅಧ್ಯಕ್ಷೆ ಹೇಮಾವತಿ, ಉಪಾಧ್ಯಕ್ಷೆ ಶಿಲ್ಪಾ ಶ್ರೀನಿವಾಸ್, ಜಿಪಂ ಸದಸ್ಯರಾದ ಕುಸುಮಾ ಬಾಲಕೃಷ್ಣ, ದೇವಿಕಾ ಪ್ರಕಾಶ್, ಮೋಹನ್ಕುಮಾರ್, ಕಸಾಪ ಅಧ್ಯಕ್ಷ ಲೋಕೇಶ್, ಪಾಂಡು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಾಸಕ ಸಿ.ಎನ್. ಬಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.