ಅಂತರ ಕಾಲೇಜು ಮಹಿಳೆ, ಪುರುಷರ ಕ್ರಾಸ್ಕಂಟ್ರಿ ಸ್ಪರ್ಧೆಗಳ ಉದ್ಘಾಟನೆ
ಹೊಳೆನರಸೀಪುರ: ಯುವ ಜನಾಂಗಕ್ಕೆ ಯಾವುದೇ ರಾಜಕೀಯ ಪಕ್ಷ, ನಾಯಕ, ಅಥವಾ ರಾಜಕಾರಣಗಳಿಗಿಂತ ದೇಶ ದೊಡ್ಡದು. ಎಲ್ಲಾ ಯುವಜನಾಂಗ ದೇಶಕ್ಕೆ ಹೆಚ್ಚು ನಿಷ್ಠರಾಗಿರಬೇಕು ಎಂದು ಯುವ ಜನತಾದಳದ ಮುಖಂಡ ಪ್ರಜ್ವಲ್ ರೇವಣ್ಣ ಹೇಳಿದರು.
ತಾಲೂಕಿನ ಪಡುವಲಹಿಪ್ಪೆಯ ಎಚ್.ಡಿ.ದೇವೇಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ದೈಹಿಕ ಶಿಕ್ಷಣ ವಿಭಾಗ, ಮೈಸೂರು ವಿಶ್ವವಿದ್ಯಾನಿಲಯ ಆಶ್ರಯದಲ್ಲಿ ಏರ್ಪಡಿಸಿದ್ದ ಮೈಸೂರು ವಿವಿ ಅಂತರ ಕಾಲೇಜುಗಳ ಪುರುಷರ ಮತ್ತು ಮಹಿಳೆಯರ ಕ್ರಾಸ್ಕಂಟ್ರಿ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ಕ್ರೀಡಾ ಸ್ಪರ್ಧೆಗಳು ಮುಗಿವವರೆಗೂ ಇದ್ದು ಎಲ್ಲಾ ಕ್ರೀಡಾಪಟುಗಳಿಗೂ ಸೇಬಿನ ಹಣ್ಣನ್ನು ವಿತರಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಡಿ.ನಾರಾಯಣ, ಮೈಸೂರು ವಿಶ್ವ ವಿದ್ಯಾನಿಯಲದ ಕ್ರೀಡಾ ನಿರ್ದೇಶಕ ಡಾ.ಸಿ.ಕೃಷ್ಣ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಜಿ.ಪಿ ಯೋಗೇಶ್, ಎನ್ಎಸ್ಎಸ್ ಅಧಿಕಾರಿ ಕೆ.ವಿ.ಪಾರ್ಥೇಶ್, ಕಾಲೇಜಿನ ಉಪನ್ಯಾಸಕ ವರ್ಗ ಮತ್ತು ವಿಶ್ವವಿದ್ಯಾನಿಲಯದ ಕ್ರೀಡಾ ಅಧಿಕಾರಿಗಳು ಇದ್ದರು