ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಎತ್ತಿನಗಾಡಿ ಎಳೆದು ಪ್ರತಿಭಟನೆ

Rashmi Kasaragodu
Updated On : 7 Sept 2013, 12:33 pm

ಕನ್ನಡಪ್ರಭ ವಾರ್ತೆ೤ ಹಾಸನ೤ ಸೆ. 6
ಹಾಸನ ಪಶು ವೈದ್ಯಕೀಯ ಕಾಲೇಜಿಗೆ ಮಾನ್ಯತೆ ನೀಡುವಂತೆ ಆಗ್ರಹಿಸಿ ಕಾಲೇಜಿನ ವಿದ್ಯಾರ್ಥಿಗಳ ಕೈಗೊಂಡಿದ್ದ ಅನಿರ್ದಿಷ್ಟಾವಧಿ ಪ್ರತಿಭಟನೆ ಶುಕ್ರವಾರ ಮೂರನೇ ದೀನಕ್ಕೆ ಕಾಲಿಟ್ಟಿದ್ದು, ವಿದ್ಯಾರ್ಥಿಗಳು ಎತ್ತಿನ ಗಾಡಿಯನ್ನು ಎಳೆಯುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.
 ಪ್ರತಿಭಟನಾಕಾರರು ನಗರದ ಪಶು ವೈದ್ಯಕೀಯ ಕಾಲೇಜಿನಿಂದ ಎತ್ತಿನಗಾಡಿ ಎಳೆಯುವ ಮೂಲಕ ಮೆರವಣಿಗೆ ಪ್ರಾರಂಭಿಸಿ, ಎಂ.ಜಿ.ರಸ್ತೆ, ಶಂಕರೀಮಠದ ರಸ್ತೆ, ಬಿ.ಎಂ.ರಸ್ತೆಯ ಮೂಲಕ ಎನ್.ಆರ್.ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿದರು. ನಂತರ ಜಿಲ್ಲಾಧಿಕಾರಿ ಕಚೇರಿಗೆ ಬಂದು ಜಿಲ್ಲಾಧಿಕಾರಿಗೆ ಮನವಿ ನೀಡಿದರು.
 ಪಶು ವೈದ್ಯರಾಗುವ ಕನಸು ಹೊತ್ತು ಹಾಸನ ಪಶುವೈದ್ಯಕೀಯ ಕಾಲೇಜಿನಲ್ಲಿ ಪದವಿ ಮುಗಿಸಿದ ನೂರಾರು ವಿದ್ಯಾರ್ಥಿಗಳು ಬೀದಿಗೆ ಬಿದ್ದಿದ್ದಾರೆ. ಕಾಲೇಜು ಆರಂಭವಾಗಿ 7 ವರ್ಷ ಕಳೆದರೂ ಭಾರತೀಯ ಪಶು ವೈದ್ಯಕೀಯ ಮಂಡಳಿ ಮಾನ್ಯತೆ ಸಿಕ್ಕಿಲ್ಲದ ಕಾರಣ ಕೋರ್ಸ್ ಮುಗಿಸಿದರೂ, ಯಾವುದೇ ಕೆಲಸಕ್ಕೆ ಸೇರಲಾಗದ ಸ್ಥಿತಿ ವಿದ್ಯಾರ್ಥಿಗಳದ್ದಾಗಿದೆ. ಇದಕ್ಕೆ ರಾಜ್ಯ ಸಕಾರಗಳ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಿದರು.  
 ಪಶುವೈದ್ಯರಾಗುವ ಕನಸು ಕಂಡಿದ್ದ ವಿದ್ಯಾರ್ಥಿಗಳಿಗೆ ಆಳುವವರ ನಿರ್ಲಕ್ಷ್ಯದಿಂದಾಗಿ ಈಗ ಬೀದಿಗೆ ಬೀಳಲಾಗಿದೆ. ಹಾಸನ ಪಶುವೈದ್ಯಕೀಯ ಕಾಲೇಜು ಆರಂಭವಾಗಿ ಏಳು ವರ್ಷ ಕಳೆದಿದೆ. ಆಗಿನಿಂದಲೂ ಹೊಸ ಕಟ್ಟಡ ನಿರ್ಮಿಸುತ್ತಿರುವುದನ್ನು ಬಿಟ್ಟರೆ ಕಾಲೇಜಿಗೆ ಬೇಕಿರುವ ಮೂಲಭೂತ ಸೌಕರ್ಯ ನೀಡಲಾಗಿಲ್ಲ.  ಏಳು ವರ್ಷಗಳಿಂದ ಅಧಿಕಾರ ನಡೆಸಿದ ರಾಜ್ಯ ಸರ್ಕಾರ ನಿರ್ಲಕ್ಷ್ಯದಿಂದಾಗಿ ಅವಶ್ಯಕ ಸೌಕರ್ಯ ಇಲ್ಲ ಅನ್ನೋ ಕಾರಣಕ್ಕೆ ಭಾರತೀಯ ಪಶುವೈದ್ಯಕೀಯ ಪರಿಷತ್ತು ಹಾಸನ ಕಾಲೇಜಿಗೆ ಮಾನ್ಯತೆ ನೀಡಿಲ್ಲದ ಕಾರಣ ಪದವಿ ಮುಗಿಸಿರುವ ವಿದ್ಯಾರ್ಥಿಗಳಿಗೆ ರಿಜಿಸ್ಟ್ರೇಷನ್ ಆಗಿಲ್ಲ ಎಂದು ದೂರಿದರು.
 ಪ್ರಮೋದ್, ನಿತಿನ್, ಕೋಟ್ರೇಶ್, ಮಾರುತಿ, ರಮೇಶ್, ಚೇನತ್, ಕಿರಣ್, ಮಂಜುನಾಥ್, ಸಂತೋಷ್, ಮೋಹನ್, ಪ್ರವೀಣಕುಮಾರ್, ರೋಹಿತ್,  ನವೀನ್, ರವಿಕುಮಾರ್, ಸುರೇಶ್, ಹಿತೈಶಿಣಿ, ರಮ್ಯ, ಕಾವ್ಯ, ಪೂರ್ಣಿಮಾ, ಪಲ್ಲವಿ, ಸಂಧ್ಯಾ, ಸೌಮ್ಯ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement