ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕಾಂಗ್ರೆಸ್ ಮುಖಂಡರೊಂದಿಗೆ ಉಸ್ತುವಾರಿ

Rashmi Kasaragodu
Updated On : 7 Sept 2013, 12:35 pm

ಕನ್ನಡಪ್ರಭ ವಾರ್ತೆ೤ ಅರಸೀಕೆರೆ೤ ಸೆ.6
ಹಾಸನ-ಚಿಕ್ಕನಾಯಕನಹಳ್ಳಿ ರಸ್ತೆ ಕಾಮಗಾರಿ ಆರಂಭಿಸಲು ಹೋರಾಟ ಮಾಡಿದ ಜನಪ್ರತಿನಿಧಿಗಳನ್ನು ಕಡೆಗಣಿಸಿ ಜನರಿಂದ ತಿರಸ್ಕತಗೊಂಡ ಕಾಂಗ್ರೆಸ್ ಮುಖಂಡರನ್ನು ಜಿಲ್ಲಾ ಉಸ್ತುವಾರಿ ಸಚಿವ ಮಹದೇವಪ್ಪ ರಸ್ತೆ ಪರಿಶೀಲನೆಗೆ ಕರೆದೊಯ್ದು ಶಾಸಕರನ್ನು ಕಡೆಗಣಿಸಿ ಅವಮಾನಿಸಲಾಗಿದೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಅಸಮಾಧಾನ ವ್ಯಕ್ತಪಡಿಸಿದರು.
 ಶುಕ್ರವಾರ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  76 ಕಿ.ಮೀ.ಉದ್ದದ ಈ ರಾಜ್ಯ ಹೆದ್ದಾರಿಗೆ 242 ಕೋಟಿ ರೂ.ಗೆ ಅಭಿಜಿತ್ ಕಂಪನಿಗೆ ಟೆಂಡರ್ ನೀಡಲಾಗಿದೆ. ಇದರಲ್ಲಿ ಕೇಂದ್ರ ಸರ್ಕಾರ 47 ಕೋಟಿ, ರಾಜ್ಯ ಸರ್ಕಾರ 45 ಕೋಟಿ ಉಳಿದ ಹಣವನ್ನು ಗುತ್ತಿಗೆದಾರರು ಹಾಕಿಕೊಂಡು 30 ವರ್ಷಗಳ ಕಾಲ ಟೋಲ್ ಸಂಗ್ರಹ ಮಾಡಿಕೊಳ್ಳಲು ಅನುಮತಿ ನೀಡಲಾಗಿತ್ತು. ಆರಂಭದಲ್ಲಿ ತ್ವರಿತಗತಿಯಲ್ಲಿ ಆರಂಭವಾದ ಈ ಕಾಮಗಾರಿ ಕಳೆದ 1 ವರ್ಷದಿಂದ ಸ್ಥಗಿತಗೊಂಡಿತ್ತು.
 ತಾವು ಎರಡನೇ ಬಾರಿಗೆ ಶಾಸಕರಾದ ನಂತರ ವಿಧಾನಸಭೆಯಲ್ಲಿ ನಿಯಮ 69ರ ಅಡಿಯಲ್ಲಿ ಈ ರಸ್ತೆ ಕಾಮಗಾರಿ ಆರಂಭಿಸಬೇಕೆಂದು ಚರ್ಚೆ ನಡೆಸಿ ಒತ್ತಾಯಿಸಿದಾಗ ಜಿಲ್ಲಾ ಉಸ್ತುವಾರಿ ಸಚಿವರು ಆ ಭಾಗದ ಶಾಸಕರೊಂದಿಗೆ ರಸ್ತೆ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಉತ್ತರ ನೀಡಿದ್ದರು. ಆದರೆ ಈಗ ಮಾತಿಗೆ ತಪ್ಪಿ ಕಾಂಗ್ರೆಸ್ ಮುಖಂಡರನ್ನು ಪರಿಶೀಲನೆಗೆ ಕರೆದೊಯ್ಯುವ ಮೂಲಕ ಜನರನ್ನು ದಾರಿ ತಪ್ಪಿಸಲು ಹೊರಟಿದ್ದಾರೆ ಎಂದು ದೂರಿದರು.
 ಈ ರಸ್ತೆ ಕಾಮಗಾರಿಯ ಬಗ್ಗೆ ಅಂದಾಜು ಸಮಿತಿಯ ಮುಂದೆ ಚರ್ಚೆ ನಡೆಸಿ ಸಮಿತಿಯ ತೀರ್ಮಾನದಂತೆ ಕೆ.ಆರ್.ಡಿ.ಸಿ.ಎಲ್. ಕಚೇರಿಯಲ್ಲಿ ಆ.28ರಂದು ಮಧ್ಯಾಹ್ನ 3 ಗಂಟೆಗೆ ಮಾಜಿ ಸಚಿವ ಎಚ್.ಡಿ.ರೇವಣ್ಣ, ತಿಪಟೂರು ಶಾಸಕ ಷಡಾಕ್ಷರಿ, ಚಿಕ್ಕನಾಯಕನಹಳ್ಳಿ ಸುರೇಶ್ಬಾಬು, ಹಾಸನ ಶಾಸಕ ಎಚ್.ಎಸ್.ಪ್ರಕಾಶ್ ಹಾಗೂ ನಾನು ಸೇರಿದಂತೆ ಗುತ್ತಿಗೆದಾರರು ಹಾಗೂ ಈ ರಸ್ತೆಗೆ ಹಣಕಾಸು ನೆರವು ನೀಡಿದ ಎಸ್.ಬಿ.ಎಂ.ವ್ಯವಸ್ಥಾಪಕರೊಂದಿಗೆ ಸಬೆ ನಡೆಸಿ ರಸ್ತೆ ಕಾಮಗಾರಿ ಚಾಲನೆ ನೀಡುವಂತೆ ತಾಕೀತು ಮಾಡಲಾಗಿತ್ತು. ರಸ್ತೆ ಕಾಮಗಾರಿ ಆರಂಭವಾಗುತ್ತದೆ ಎಂಬುದನ್ನು ಅರಿತು ಜಿಲ್ಲಾ ಉಸ್ತುವಾರಿ ಸಚಿವರು ಜನರಿಂದ ತಿರಸ್ಕೃತರಾದ ಕಾಂಗ್ರೆಸ್ ಮುಖಂಡರನ್ನು ಕರೆದುಕೊಂಡು ಹೋಗಿ ತಮ್ಮಿಂದಲೇ ಕಾಮಗಾರಿ ಆರಂಭವಾಗಿದೆ ಎಂಬುದನ್ನು ಬಿಂಬಿಸಲು ಹೊರಟಿದ್ದಾರೆ ಎಂದು ಟೀಕಿಸಿದರು.
 ಜಿಲ್ಲಾ ಉಸ್ತುವಾರಿ ಸಚಿವರು ಗುರುವಾರ ಹಾಸನಕ್ಕೆ ಬಂದಾಗ ತಾವು ದೂರವಾಣಿ ಮೂಲಕ ಸಂಪರ್ಕಿಸಿ ಈ ಬಗ್ಗೆ ವಿಚಾರಿಸಿದಾಗ ನನಗೆ ಹುಷಾರಿಲ್ಲದ ಕಾರಣ ಶಿಕ್ಷಕರ ದಿನಾಚರಣೆ ಮುಗಿಸಿಕೊಂಡು ವಾಪಸ್ ತೆರಳುವುದಾಗಿ ತಿಳಿಸಿ  ಕಾಮಗಾರಿ ಆರಂಭಿಸಲು ಹೋರಾಟ ಮಾಡಿದ ಜನಪ್ರತಿನಿಧಿಗಳನ್ನು ಕಡೆಗಣಿಸಿ ಸಾರ್ವಜನಿಕವಾಗಿ ಅವಮಾನ ಮಾಡಿರುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹುಚ್ಚೇಗೌಡ, ಪುರಸಭಾ ಸದಸ್ಯ ಪಂಚಾಕ್ಷರಿ, ಸುರೇಶ್, ಮಂಜುನಾಥ್, ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement