ಪೆಟ್ರೋಲ್ ಬೆಲೆ ಏರಿಕೆ; ಸಾಮಾನ್ಯರ ಬದುಕು ದುಸ್ತರ: ಶಾಸಕ ಬಾಲಕೃಷ್ಣ
ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ ಸೆ. 6
ಕೇಂದ್ರ ರಾಜ್ಯ ಸರ್ಕಾರಗಳು ಡೀಸೆಲ್, ಪೆಟ್ರೋಲ್ ಬೆಲೆ ಏರಿಸಿರುವುದರಿಂದ ಜನ ಸಾಮಾನ್ಯರ ಬದುಕು
ತುಂಬಾ ಕಷ್ಟಕರವಾಗಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ವಿಷಾದಿಸಿದ್ದಾರೆ.
ಗ್ರಾಮ ಪಂಚಾಯ್ತಿ ಆವರಣದಲ್ಲಿ ನಡೆದ ಪಡಿತರ ಕಾರ್ಡ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಅಕ್ಕಿಯನ್ನು ಮಾತ್ರ ಒಂದು ರುಪಾಯಿಗೆ ಕೊಟ್ಟು, ರೈತರಿಗೆ ಬೇಕಾದ ರಸಗೊಬ್ಬರ ಇತರೆ ಪದಾರ್ಥಗಳ ಬೆಲೆ ಏರಿಸಿರುವುದರಿಂದ ಜನ ಸಾಮಾಸ್ಯರು ಬದುಕುವುದು ಕಷ್ಟವಾಗಿದೆ ಎಂದರು. ನುಗ್ಗೇಹಳ್ಳಿ ಕುಡಿಯುವ ನೀರಿನ ಯೋಜನೆಗೆ 8.5 ಕೋಟಿ ರು. ಬಿಡುಗಡೆಯಾಗಿದ್ದು, ತಿಂಗಳಲ್ಲಿ ಕಾಮಗಾರಿ ಪ್ರಾರಂಭವಾಗುವುದು ಎಂದರು. ಮುಖ್ಯ ರಸ್ತೆಗೆ ಕಾಂಕ್ರಿಟ್, ಗ್ರಾಮಕ್ಕೆ 1 ಕಿ.ಮೀ. ಡಾಂಬರ್ ರಸ್ತೆ ಹಾಗೂ ನುಗ್ಗೇಹಳ್ಳಿ ಆಸ್ಪತ್ರೆಗೆ ತುರ್ತಾಗಿ ಮತ್ತೊಬ್ಬ ಕಾಯಂ ವೈದ್ಯರನ್ನು ನೇಮಿಸುವುದಾಗಿ ತಿಳಿಸಿದರು. ಇದೇ ವೇಳೆ 325 ಬಿಪಿಎಲ್ ಕಾರ್ಡ್ ವಿತರಿಸಿದರು. ಗ್ರಾಪಂ ಉಪಾಧ್ಯಕ್ಷ ಎಲ್ಲಯ್ಯ, ಎಚ್ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಕೆಂಪನಂಜೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಆರ್. ದೊರೆಸ್ವಾಮಿ, ಜೆಡಿಎಸ್ ಮುಖಂಡ ಮುರಳಿ, ಗ್ರಾಪಂ ಮಾಜಿ ಅಧ್ಯಕ್ಷ ಎಚ್.ಎಂ ಗೋಪಾಲ್, ಮಾಜಿ ಉಪಾಧ್ಯಕ್ಷ ಬಸವಲಿಂಗಪ್ಪ, ಗ್ರಾಪಂ ಮಾಜಿ ಉಪಾಧ್ಯಕ್ಷ ರಂಗಸ್ವಾಮಿ, ಪಿಡಿಓ ಗಂಗಾಧರ್ ಇದ್ದರು.