ಪ್ರಾಥಮಿಕ, ಪ್ರೌಢಶಾಲೆ ವಿಭಾಗದ ನಿರ್ದೇಶಕರ ಚುನಾವಣೆಗೆ ಆಗ್ರಹ
ಹೊಳೆನರಸೀಪುರ: ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ನಿರ್ದೇಶಕರುಗಳ 4 ಸ್ಥಾನಗಳಿಗೆ ಚುನಾವಣೆಯ ಸುತ್ತೋಲೆಯ ಪ್ರಕಾರವಾಗಿ ಕೂಡಲೇ ಚುನಾವಣೆ ನಡೆಸುವಂತೆ ಇಲ್ಲಿನ ಬ್ಯಾಡರಹಳ್ಳಿ ಸಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಕೆ.ಟಿ.ರವಿಕುಮಾರ್ ಹಾಗೂ ಶಿಕ್ಷಕ ಡಿ.ಸಿ.ಮಹೇಶ್, ಸೋಮಣ್ಣಯ್ಯ ತಾಲೂಕು ಘಟಕವನ್ನು ಆಗ್ರಹಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ತಾಲೂಕು ಘಟಕದ ಚುನಾವಣೆ ಸಂದರ್ಭದಲ್ಲಿ ಸಂಬಂಧಿಸಿದ ಶಿಕ್ಷಣ ಇಲಾಖೆಯ ಶಿಕ್ಷಕರ ಮತದಾನದ ಪಟ್ಟಿಯನ್ನು ನಿಗಧಿತ ಅವಧಿಯೊಳಗೆ ಸಲ್ಲಿಸದ ಕಾರಣದಿಂದಾಗಿ ಶಿಕ್ಷಕರ ವಿಭಾಗದ 4 ಸ್ಥಾನಗಳಿಗೆ ಚುನಾವಣೆ ನಡೆಸಿಲ್ಲ ಎಂದು ತಾಲೂಕು ಘಟಕ ಈಗಾಗಲೇ ಹೇಳಿಕೆ ನೀಡಿದೆ.
ಆದರೆ ತಾಲೂಕಿನ ಶಿಕ್ಷಕರ ಮನವಿಯ ಮೇರೆಗೆ ರಾಜ್ಯ ಸಂಘವು ಸೆ.7 ರಂದು ಚುನಾವಣೆ ನಡೆಸಲು ಅನುಮತಿ ನೀಡಿದ್ದರೂ, ತಾಲೂಕು ಘಟಕದ ಅಧ್ಯಕ್ಷರು ಸಬೂಬು ಹೇಳುತ್ತಾ ಚುನಾವಣೆಯನ್ನು ನಡೆಸಿರುವುದಿಲ್ಲ ಎಂದು ಶಿಕ್ಷಕ ಕೆ.ಟಿ.ರವಿಕುಮಾರ್ ದೂರಿದ್ದಾರೆ.