ಪ್ರಿಪೇಯ್ಡ್ ಆಟೋ ವ್ಯವಸ್ಥೆಗೆ ಒತ್ತಾಯ
ಬೆಂಗಳೂರು-ಮೈಸೂರಿನಲ್ಲಿ ಚಾಲ್ತಿಯಲ್ಲಿರುವ ಪ್ರಿಪೇಯ್ಡ್ ಆಟೋ ನಿಲ್ದಾಣದಂತೆ ನಗರದ ಹೈಟೆಕ್ ಬಸ್ ನಿಲ್ದಾಣ ಹಾಗೂ ರೇಲ್ವೆ ನಿಲ್ದಾಣಗಳಲ್ಲಿ ಪ್ರಿಪೇಯ್ಡ್ ಆಟೋ ನಿಲ್ದಾಣ ಸ್ಥಾಪಿಸುವಂತೆ ಹಲವು ಬಾರಿ ಸಾರ್ವಜನಿಕರು ಒತ್ತಡ ಹಾಕಿದ್ದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಈ ವ್ಯವಸ್ಥೆ ಕಲ್ಪಿಸುವಂತಹ ಗೋಜಿಗೆ ಹೋಗಿಲ್ಲ.
ಜೊತೆಗೆ ಆಟೋ ರಿಕ್ಷಾಗಳ ನಿಗದಿತ ದರವನ್ನು ಸಹ ಸರಿಯಾಗಿ ನಿಗದಿಪಡಿಸದಿರುವುದರಿಂದ ಆಟೋ ಚಾಲಕರು ಹಾಗೂ ಪ್ರಯಾಣಿಕರ ನಡುವೆ ಗೊಂದಲಕ್ಕೆ ಕಾರಣವಾಗಿದೆ.