ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯತೆ, ರಾಷ್ಟ್ರೀಯ ಪ್ರಜ್ಞೆ ಮೂಡಬೇಕು'

Rashmi Kasaragodu
Updated On : 7 Sept 2013, 12:38 pm

ಅರಸೀಕೆರೆ: ರಾಷ್ಟ್ರೀಯತೆ, ರಾಷ್ಟ್ರಪ್ರೇಮ ಹಾಗೂ ರಾಷ್ಟ್ರ ಪುನರ್ ನಿರ್ಮಾಣ ಬಗ್ಗೆ ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಪ್ರಜ್ಞೆ ಮೂಡಬೇಕು ಎಂದು ಜಿಲ್ಲಾ ಸಂಚಾಲಕ ಕಣಕಟ್ಟೆ ಮಂಜು ಅಭಿಪ್ರಾಯಪಟ್ಟರು.
 ಪಟ್ಟಣದ ಸೀತಾರಾಮ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ನಿಂದ ಏರ್ಪಡಿಸಲಾಗಿದ್ದ ವಿದ್ಯಾರ್ಥಿ ಮುಖಂಡರ ಸಭೆ ಹಾಗೂ ನಗರ ಅಭ್ಯಾಸ ವರ್ಗದಲ್ಲಿ ಮಾತನಾಡಿದ ಅವರು ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ಹುತಾತ್ಮರ ಹಾಗೂ ಮಹಾತ್ಮರ ಜೀವನಶೈಲಿ ಹಾಗೂ ಅವರ ತತ್ವ, ಆದರ್ಶಗಳನ್ನು ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ರಾಷ್ಟ್ರಪ್ರೇಮವನ್ನು ಬೆಳೆಸಿಕೊಳ್ಳಬೇಕೆಂದರು.
ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣಗಳನ್ನು ಕಾಲೇಜಿನ ವ್ಯಾಸಂಗದೊಂದಿಗೆ ಬೆಳೆಸಿಕೊಳ್ಳಬೇಕು. ನಾವು ಮಾಡುವ ಕಾರ್ಯ ಹಾಗೂ ಪರೋಪಕಾರಗಳ ಮೂಲಕ ಜನರೇ ನಮ್ಮನ್ನು ನಾಯಕನನ್ನಾಗಿ ಒಪ್ಪಿಕೊಳ್ಳುವಂತಹ ಉತ್ತಮ ವಾತಾವರಣ ಸೃಷ್ಟಿಮಾಡಬೇಕೆಂದು ಹೇಳಿದರು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಭಿಷೇಕ್ ಮಾತನಾಡಿದರು.ಪೂಲ್ಚಂದ್ ಸ್ವಾಗತಿಸಿದರು. ನಿಖಿಲ್ ವಂದಿಸಿದರು. ಸಭೆಯಲ್ಲಿ ಎಬಿವಿಪಿ ನಗರ 2013-2014 ರ ಸಮಿತಿಯನ್ನು  ಘೋಷಣೆ ಮಾಡಲಾಯಿತು. ನಗರ ಸಮಿತಿ ಅಧ್ಯಕ್ಷ ಬೆಳ್ಳವಳ್ಳಿ ಕುಬೇರಪ್ಪ ನಗರ ಕಾರ್ಯದರ್ಶಿ ನಂದಿನಿ ಮೆಳವಂಕಿ, ಕೆ.ಎಸ್.ಗಿರೀಶ್, ವೇದಾಂತ್,ವಿದ್ಯಾ, ಎ.ಸಿ.ಶರತ್, ಪುನೀತ್, ತ್ರಿವೇಣಿ , ಶಿಲ್ಪ ಎಂ.ವಿ. ಮೇಘ, ಹೇಮಾ ಆಯ್ಕೆ ಮಾಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement