ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ಸಂಘದ ಸದಸ್ಯತ್ವ: ಶಾಸಕರ ಅನಗತ್ಯ ಹಸ್ತಕ್ಷೇಪ'

Rashmi Kasaragodu
Updated On : 7 Sept 2013, 12:33 pm

ಚನ್ನರಾಯಪಟ್ಟಣ: ತಾಲೂಕಿನ ಸಹಕಾರ ಸಂಘಗಳಲ್ಲಿ ಸದಸ್ಯತ್ವ ನೀಡದಂತೆ ಶಾಸಕರು ಅನಗತ್ಯವಾಗಿ ತಲೆ  ತೂರಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಸಿ.ಎಸ್. ಪುಟ್ಟೇಗೌಡ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.  ತಾಲೂಕಿನಲ್ಲಿ ಸಹಕಾರ ಸಂಘಗಳನ್ನು ತಮ್ಮ ಹತೋಟಿಯಲ್ಲಿಟ್ಟುಕೊಳ್ಳುವ ಸಲುವಾಗಿ ಶಾಸಕ ಸಿ.ಎನ್. ಬಾಲಕೃಷ್ಣ ಕಾಂಗ್ರೆಸ್ ಕಾರ್ಯಕರ್ತರಿಗೆ ಸದಸ್ಯತ್ವ ನೀಡದಂತೆ ಸಹಕಾರಿ ಸಂಘಗಳಿಗೆ ನಿರ್ದೇಶನ ನೀಡುವ ಮುಖೇನ ತಾರತಮ್ಯ ಮಾಡುತ್ತಿದ್ದಾರೆ ಎಂದು ದೂರಿದರು.  ನುಗ್ಗೇಹಳ್ಳಿ ಜಿಪಂ ಸದಸ್ಯ ರಂಗಸ್ವಾಮಿ ಅವರು ನುಗ್ಗೇಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸದಸ್ಯರಾಗಲು ಅರ್ಜಿ ಸಲ್ಲಿಸಿದ್ದು, ಅವರಿಗೆ ಸದಸ್ಯತ್ವ ನೀಡದೆ ರಾಜಕೀಯ ತಾರತಮ್ಯ ತೋರಿದ್ದಾರೆ ಎಂದು ಆಪಾದಿಸಿದರು.   ತಾಲೂಕಿನ ಕಬ್ಬಳಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂಬ ದೃಷ್ಟಿಯಿಂದ ಕಳೆದ 8 ವರ್ಷಗಳಿಂದ ಕೆಲ ಕಾರಣವೊಡ್ಡಿ ಮುಂದೂಡುತ್ತಾ ಬಂದಿದ್ದರು. ಆದರೆ ಸರ್ಕಾರದ ಆದೇಶದಂತೆ ನಡೆದ ಚುನಾವಣೆಯಲ್ಲಿ ಕಾಂತರಾಜೇಗೌಡ, ಗಣೇಶಗೌಡ, ದೇವರಾಜು, ನಾರಾಯಣಗೌಡ, ನಂಜುಂಡಯ್ಯ, ಪುಟ್ಟಸ್ವಾಮೀಗೌಡ, ರೇಖಮ್ಮ, ರಂಗೇಗೌಡ, ರಾಜು ಹಾಗೂ  ಕಾಂಚನ ಅವರುಗಳು  ತಮ್ಮ ಪಕ್ಷದ ಬೆಂಬಲಿಗರಾಗಿ ಗೆಲವು ಸಾಧಿಸಿದ್ದಾರೆ.   ಜಿಪಂ ಮಾಜಿ ಉಪಾಧ್ಯಕ್ಷ ಎಚ್.ಎಸ್. ವಿಜಯ್ಕುಮಾರ್, ರಂಗಸ್ವಾಮಿ, ಗೋಪಾಲಸ್ವಾಮಿ, ರಂಗೇಗೌಡ ಇದ್ದರು.
ಗಣಪತಿ ಸಮಿತಿ; 48 ದಿನ ಧಾರ್ಮಿಕ, ಕಾರ್ಯಕ್ರಮ
ಚನ್ನರಾಯಪಟ್ಟಣ: ಪಟ್ಟಣದ ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿಯಿಂದ ಸೆ.9ರಂದು ಪ್ರತಿಷ್ಠಾಪಿಸಿ 48 ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸೇವಾ ಸಮಿತಿ ಅಧ್ಯಕ್ಷ ಚ.ನಂ. ಅಶೋಕ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.  ಸೇವಾ ಸಮಿತಿ ವತಿಯಿಂದ ಕಳೆದ 45 ವರ್ಷಗಳಿಂದ ಪ್ರತಿ ವರ್ಷ ಮೂರ್ತಿಯನ್ನು ಪ್ರತಿಷ್ಠಾಪಿಸಿ ನಾನಾ  ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು, ಪ್ರಸಕ್ತ ವರ್ಷ 9 ಅಡಿಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುವುದು ಹಾಗೂ 30 ದಿನಗಳು ದಾಸೋಹ ಹಮ್ಮಿಕೊಳ್ಳಲಾಗಿದೆ ಎಂದರು.  48ನೇ ದಿನ ಪಟಾಕಿ ಪ್ರದರ್ಶನ ಹಾಗೂ ಪಟ್ಟಣದಲ್ಲಿ ಮೂರ್ತಿಯನ್ನು ಮೆರವಣಿಗೆ ನಡೆಸಿ ವಿಸರ್ಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.   ಪಟ್ಟಣದಲ್ಲಿ ಎಲ್ಲಾ ಧರ್ಮೀಯರೂ ಸೌಹಾರ್ಧಯುತವಾಗಿ ಸಾಗುವ ನಿಟ್ಟಿನಲ್ಲಿ ಮುಸ್ಲಿಮರು ಒಂದು ದಿನದ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಡಲು ಒಪ್ಪಿಗೆ ಸೂಚಿಸಿದ್ದು, ಇದೊಂದು ಸೌಹಾರ್ದ ಸಂಬಂದವನ್ನು ಸೂಚಿಸುತ್ತದೆ.  ದಾನಿಗಳು ಸೇವಾ ಸಮಿತಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕಾಗಿ ಕೋರಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement