ಸಂತ ಫಿಲೋಮಿನಾ ಕಾಲೇಜಲ್ಲಿ ಪದವಿ ಪುರಸ್ಕಾರ
ಹಾಸನ: ನಗರದ ಸಂತ ಫಿಲೋಮಿನ ವಿದ್ಯಾಸಂಸ್ಥೆಯಲ್ಲಿ ಪದವಿ ಕಾಲೇಜಿನ ಮೊದಲ ತಂಡದ ಪದವಿ ಪುರಸ್ಕಾರ ಸಮಾರಂಭ ನಡೆಯಿತು. ಮೈಸೂರು ವಿವಿ ಪ್ರೊ. ಡಾ. ಎನ್. ನಾಗರಾಜು ಮಾತನಾಡಿ,
ವಿದ್ಯಾರ್ಥಿನಿಯರು ಸದ್ಗುಣ ಕಾರ್ಯಸಕ್ತಿ ಶಿಸ್ತು ಸಂಯಮ ಮೈಗೂಡಿಸಿಕೊಳ್ಳಬೇಕೆಂದರು. ಮುಖ್ಯ ಅತಿಥಿ ಸಿಸ್ಟರ್ ಮರ್ಸಿಲಿನ್ ವೇಗಸ್ ವಿದ್ಯಾರ್ಥಿನಿಯರ ಭವಿಷ್ಯ ಉಜ್ವಲವಾಗುವಂತ ಕ್ರಿಯಾತ್ಮಕ ನುಡಿಗಳನ್ನಾಡಿದರು. ರೆ. ಜಾನ್ ಅಧ್ಯಕ್ಷತೆ ವಹಿಸಿದ್ದರು. 2012-13 ನೇ ಸಾಲಿನಲ್ಲಿ ಅಮೂಲ್ಯ ಫೆಲಿಕ್ಸ್ (88.53), ಜನಿತಾ ಮೋನಿಸ್ (86.62) ಸುಷ್ಮಾ ಡಿ ಸೋಜ (85.96) ಮತ್ತು ಸೋನಾಲಿ ಎಮ್.ಎಲ್ (84.75) ಮೊದಲ ನಾಲ್ಕ ಸ್ಥಾನಗಳಲ್ಲಿ ಪುರಸ್ಕೃತರಾದರು. 53 ಉನ್ನತ ಶ್ರೇಣಿ ಹಾಗೂ ವಿಷಯವಾರು ಹೆಚ್ಚಿನ ಅಂಕಗಳನ್ನು ಗಳಿಸಿದ ವಿದ್ಯಾರ್ಥಿನಿಯರಿಗೂ ಬಹುಮಾನ ವಿತರಿಸಲಾಯಿತು. ಇದೇ ವೇಳೆ ಸಂತ ಫಿಲೋಮಿನಾ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಅಂತರ್ಜಾಲ .ಡಡಿಝ್ಝಟ್ಟಟಜಟಿಛಡ ಋ್ಜ್ಛ.್ಛ್ಟಟ ತಾಣಕ್ಕೆ ಜಾಲನೆ ನೀಡಲಾಯಿತು. ರೂಪರಾವ್, ಸದಾನಂದ ಸ್ವಾಮಿ ನಿರೂಪಿಸಿದರು. ಚಿರಂತ ಸ್ವಾಗತಿಸಿದರು. ಡೇವಿಡ್ಕುಮಾರ್ ಅತಿಥಿಗಳ ಪರಿಚಯ ಮಾಡಿದರು. ರಾಘು ವಂದಿಸಿದರು.