ಹಾಸನದ ವಿದ್ಯಾರ್ಥಿಗಳಿಗೆ ಪ್ರಥಮ ಸ್ಥಾನ
ಹಾಸನ: ಈಚೆಗೆ ಮುಂಬೈನಲ್ಲಿ ನಡೆದ 9ನೇ ರಾಷ್ಟ್ರಮಟ್ಟದ ಅಬಾಕಸ್ ಹಾಗೂ ಮೆಂಟಲ್ ಅರ್ಥಮೆಟಿಕ್ಸ್ಸ್ಪರ್ಧೆಯಲ್ಲಿ ನಗರದ 8 ಮಕ್ಕಳು ಭಾಗವಹಿಸಿದ್ದು, ಐಪಿಎ, ಎಸ್.ಜಿ.ಆರ್. ಕೇಂದ್ರದಿಂದ 4 ವಿದ್ಯಾರ್ಥಿಗಳು ಹಾಗೂ ಐಪಿಎ ಹಾಸನ್ ಸೆಂಟರ್ನಿಂದ 4 ವಿದ್ಯಾರ್ಥಿಗಳು ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆದರು.ಎಸ್.ಜಿ.ಆರ್. ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳಾದ ಪ್ರಜ್ವಲ್, ಲಕ್ಷ್ಮಿ, ಚಂದನ್, ವಿಸ್ಮಯ, ಲೋಕೇಶ್ ಎಸ್.ಜಿ.ಆರ್. ಸೆಂಟರ್ ಮತ್ತು ಐಪಿಎ ಹಾಸನ್ ಸೆಂಟರ್ನಿಂದ ತರುಣಸಾಗರ್, ಶಿರಮಾರನಹಳ್ಳಿಯ ಮನ್ವಿತ್, ಭುವನೇಶ್ ಪುಟಾಣಿಗಳನ್ನು ಅಭಿನಂದಿಸಲಾಯಿತು. ಸ್.ಜಿ.ಆರ್. ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಮಮತಾ ಶಿವು, ಶಿವಣ್ಣ, ಜಯಂತಿ, ರೇಷ್ಮಾ ಭಾನು, ಮೋಹನ್ ಇದ್ದರು.