ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಉಸ್ತುವಾರಿ ಸಚಿವರ ವಿರುದ್ಧ ಸ್ಪೀಕರ್, ಸಿಎಂಗೆ ಪತ್ರ: ರೇವಣ್ಣ

Mainashree
Updated On : 8 Sept 2013, 12:39 pm

ಹಾಸನ: ಹೊಳೆನರಸೀಪುರ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಗೆ ಬರುವ ದುದ್ದ ಬಳಿ ನಡೆಯುತ್ತಿರುವ ದುದ್ದ- ಚಿಕ್ಕನಾಯಕನಹಳ್ಳಿ- ಹಾಸನ ರಸ್ತೆ ನಿರ್ಮಾಣ ಕಾಮಗಾರಿಯ ಸ್ಥಿತಿಗತಿಯನ್ನು ಉಸ್ತುವಾರಿ ಸಚಿವರು, ಕೆಲ ಕಾಂಗ್ರೆಸ್ ಮುಖಂಡರೊಡನೆ ಪರಿಶೀಲನೆ ನಡೆಸಿದ್ದು ಜೆಡಿಎಸ್ ಮುಖಂಡರಲ್ಲಿ ತೀವ್ರ ಅಸಮಾಧಾನ ಉಂಟು ಮಾಡಿದೆ.
ಈ ಬಗ್ಗೆ ಮಾಜಿ ಸಚಿವ ಎಚ್.ಡಿ.ರೇವಣ್ಣ, ಶಾಸಕ ಕೆ.ಎಂ. ಶಿವಲಿಂಗೇಗೌಡರು ಖಂಡಿಸಿದ್ದು, ಉಸ್ತುವಾರಿ ಸಚಿವರ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಎಚ್.ಡಿ.ರೇವಣ್ಣ, ಶಿಕ್ಷಕರ ದಿನಾಚರಣೆ ಸರ್ಕಾರಿ ಕಾರ್ಯಕ್ರಮಕ್ಕೆ ಬಂದ ಉಸ್ತುವಾರಿ ಸಚಿವರು, ಕಾಂಗ್ರೆಸ್ ಮುಖಂಡರೊಡನೆ ದುದ್ದ ರಸ್ತೆ ಕಾಮಗಾರಿಯನ್ನು ವೀಕ್ಷಿಸಿದ್ದು ಸರಿಯಲ್ಲ. ಇದು ಶಿಷ್ಟಾಚಾರದ ಸ್ಪಷ್ಟ ಉಲ್ಲಂಘನೆ. ತಮ್ಮ ಕ್ಷೇತ್ರದ ವ್ಯಾಪ್ತಿಗೆ ಬರುವ ದುದ್ದ ರಸ್ತೆ ಪರಿಶೀಲನೆಗೆ ಹೋಗುವ ವಿಚಾರವನ್ನು ಸೌಜನ್ಯಕ್ಕಾದರೂ ತಮಗೆ ತಿಳಿಸದೇ ಹೋಗಿರುವ ಕ್ರಮ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಚಿವರ ಕ್ರಮವನ್ನು ವಿರೋಧಿಸಿ ವಿಧಾನಸಭೆ ಅಧ್ಯಕ್ಷರು ಮತ್ತು ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗುತ್ತಿದ್ದು, ಅಭಿವೃದ್ಧಿಗೆ ನಾನು ಸೇರಿದಂತೆ ಯಾರೇನು ಅಡ್ಡಿಪಡಿಸಿಲ್ಲ ಎಂದರು.
ರಾಜ್ಯ ಹೆದ್ದಾರಿ ರಸ್ತೆಗಳನ್ನು ಅಭಿವೃದ್ಧಿಪಡಿಸಲು 25 ಸಾವಿರ ಕೋಟಿ ಮತ್ತು ಜಿಲ್ಲೆಗಳ ಪ್ರಮುಖ ರಸ್ತೆಗಳ ಅಭಿವೃದ್ಧಿಗೆ 10 ಸಾವಿರ ಕೋಟಿ ಅವಶ್ಯವಿದೆ. ಆದರೆ ಬಜೆಟ್‌ನಲ್ಲಿ ರಾಜ್ಯದ ರಸ್ತೆಗಳ ಅಭಿವೃದ್ಧಿಗೆ ನಿಗದಿ ಮಾಡಿರುವುದು 2 ಸಾವಿರ ಕೋಟಿ ಮಾತ್ರ. ಹೀಗಾದರೆ ಮಳೆಗಾಲದ ನಂತರದಲ್ಲಿ ರಸ್ತೆಗಳ ಅಭಿವೃದ್ಧಿಪಡಿಸುವುದು ಹೇಗೆ   ಎಂದು ಇದೇವೇಳೆ ರೇವಣ್ಣ ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement