ಗೌರಿ ಗಣೇಶ ಹಬ್ಬ: ಶಾಸಕ ರೇವಣ್ಣ, ಪ್ರಕಾಶ್ ಶುಭಾಶಯ
ಹಾಸನ: ಗೌರಿ-ಗಣೇಶ್ ಹಬ್ಬದ ಪ್ರಯುಕ್ತ ಶಾಸಕ ಎಚ್.ಡಿ.ರೇವಣ್ಣ ಹಾಗೂ ಎಚ್.ಎಸ್.ಪ್ರಕಾಶ್ ಜಿಲ್ಲೆಯ ಜನತೆಗೆ ಶುಭ ಕೋರಿದ್ದಾರೆ. ಜಿಲ್ಲೆಯ ಜನತೆಗೆ ಗೌರಿ-ಗಣೇಶ್ ಐಶ್ವರ್ಯ ಹಾಗೂ ಇಷ್ಟಾರ್ಥಗಳನ್ನು ಕರುಣಿಸಲಿ, ಎಲ್ಲರಿಗೂ ಒಳ್ಳೆಯದಾಗಲಿ ಎಂದು ಶುಭಕೋರಿದರು.
ಜಲಾಶಯಗಳ ನೀರಿನ ಮಟ್ಟ
ಹಾಸನ: ಹೇಮಾವತಿ ಜಲಾಶಯಕ್ಕೆ ಶನಿವಾರ 2138 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, 4300 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಗರಿಷ್ಠ ಮಟ್ಟ 2922 ಅಡಿ, ಇಂದಿನ ಮಟ್ಟ 2921.01 ಅಡಿಯಾಗಿದ್ದು, 36.194 ಟಿಎಂಸಿ ನೀರು ಸಂಗ್ರಹವಾಗಿದೆ.
ಯಗಚಿ ಜಲಾಶಯ: ನೀರಿನ ಮಟ್ಟ 3164.890 ಅಡಿ, ಒಳ ಹರಿವು 375 ಕ್ಯುಸೆಕ್, ಹೊರ ಹರಿವು ನಾಲೆಗೆ 175 ಕ್ಯುಸೆಕ್, ನದಿಗೆ 200 ಕ್ಯುಸೆಕ್ ಒಟ್ಟು 3.600 ಟಿಎಂಸಿ ನೀರು ಸಂಗ್ರಹವಾಗಿದೆ.
ವಾಟೆ ಹೊಳೆ: 3165.68 ಅಡಿ, ಒಳ ಹರಿವು 145 ಕ್ಯುಸೆಕ್, ಹೊರ ಹರಿವು 40 ಕ್ಯುಸೆಕ್ ಒಟ್ಟು 1.302 ಟಿಎಂಸಿ ನೀರು ಸಂಗ್ರಹವಾಗಿದೆ.