ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಬಾರದ ಬಸ್, ವಿದ್ಯಾರ್ಥಿಗಳ ಪ್ರತಿಭಟನೆ

Rashmi Kasaragodu
Updated On : 7 Sept 2013, 11:45 am

 ಹಾಸನ: ಪಟ್ಟಣದಿಂದ ಹಾಸನ ಮತ್ತು ತಿಪಟೂರು ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಅವಶ್ಯ ಬಸ್ ವ್ಯವಸ್ಥೆ ಮಾಡದ ಸಂಸ್ಥೆ ಅಧಿಕಾರಿಗಳ ವರ್ತನೆ ಖಂಡಿಸಿ ಕಾಲೇಜು ವಿದ್ಯಾರ್ಥಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಸಾರಿಗೆ ಬಸ್ನಿಲ್ದಾಣದಲ್ಲಿ ಶುಕ್ರವಾರ ಬೆಳಿಗ್ಗೆ 7 ರಿಂದ 9 ಗಂಟೆಯಾದರೂ ತಿಪಟೂರು ಮಾರ್ಗದಲ್ಲಿ ಹೋಗಬೇಕಾದ ಅನೇಕ ಬಸ್ಗಳು ನಿಲ್ದಾಣಕ್ಕೆ ಬಾರದಿದ್ದ ಕಾರಣ ತಿಪಟೂರಿನ ನಾನಾ ಕಾಲೇಜಿಗೆ ಹೋಗುವ  ವಿದ್ಯಾರ್ಥಿ, ವಿದ್ಯಾರ್ಥಿನಿಯರು ಗುಂಪು ಸೇರಿ ಸ್ಥಳೀಯ ಕೆಎಸ್ಆರ್ಟಿಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿನಿತ್ಯ ತಾಲೂಕಿನ ನಾನಾ ಗ್ರಾಮಗಳಿಂದ ಹಾಸನ ಮತ್ತು ತಿಪಟೂರು ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಬಸ್ ಪಾಸ್ ಪಡೆದು ಸಂಚರಿಸುತ್ತಿರುವ ಕಾರಣ ಪ್ರತಿನಿತ್ಯ ಓಡಾಡುವ ಬಸ್ಗಳಿಗೆ ಹೆಚ್ಚಿನ ಹಣ ಸಂಗ್ರಹಣೆ ಆಗುವುದಿಲ್ಲ ಎಂಬ ಕಾರಣಕ್ಕೆ ಬಸ್ ಚಾಲಕರು ಮತ್ತು ನಿರ್ವಾಹಕರು ವಿದ್ಯಾರ್ಥಿಗಳನ್ನು ಎಕ್ಸ್ಪ್ರೆಸ್ ಬಸ್ಗಳಲ್ಲಿ ಹತ್ತಿಸಿಕೊಳ್ಳದೆ ಬೇರೆ ಬಸ್ಗಳಲ್ಲಿ ಬರುವಂತೆ ಬಿಟ್ಟು ಹೋಗುವುದು. ಅಲ್ಲದೆ ಕಾಲೇಜಿನ ಸಮಯದಲ್ಲಿ ಬಸ್ಗಳನ್ನು ನಿಲ್ದಾಣಕ್ಕೆ ತಾರದೆ ಹೋಗುವುದು ಸಾಮಾನ್ಯ ಸಂಗತಿಯಾಗಿದೆ. ಅನೇಕ ಎಕ್ಸ್ಪ್ರೆಸ್ ಬಸ್ಗಳು ಬೇಕೆಂದೆ ಈ ಸಮಯದಲ್ಲಿ ನಿಧಾನವಾಗಿ ಬರುತ್ತವೆ. ಇದರಿಂದ ಪ್ರತಿನಿತ್ಯ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತೆದೆ ಎಂದು ವಿದ್ಯಾರ್ಥಿಗಳು ದೂರಿದರು.   ಅಲ್ಲದೇ ಈ ಬಗ್ಗೆ ಸಂಸ್ಥೆಯ ಸ್ಥಳೀಯ ಅಧಿಕಾರಿಗಳು ಮತ್ತು ಉನ್ನತ ಅಧಿಕಾರಿಗಳಿಗೆ ಈ ಬಗ್ಗೆ ಅನೇಕ ಬಾರಿ ಲಿಖಿತ ಮನವಿ ಸಲ್ಲಿಸಲಾಗಿದೆ. ಆದರೆ, ಇದುವರೆಗೂ ಪ್ರಯೋಜನವಾಗಿಲ್ಲ ಎಂದು ವಿದ್ಯಾರ್ಥಿಗಳು  ಆರೋಪಿಸಿದರು.
ಸ್ಥಳಕ್ಕೆ ಆಗಮಿಸಿದ ನಗರಠಾಣೆ ಎಸ್ಐ ಲೋಕೇಶ್ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿ ತಕ್ಷಣವೇ ಹಲವು ಬಸ್ಗಳ ವ್ಯವಸ್ಥೆ ಮಾಡಿದ ಹಿ ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟು ತಿಪಟೂರು ಮತ್ತು ಹಾಸನದ ಬಸ್ ಮೂಲಕ ತಂತಮ್ಮ ಕಾಲೇಜುಗಳಿಗೆ ತೆರಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement