ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ಬೇಲೂರು ತಹಸೀಲ್ದಾರ್ ಕಾಂಗ್ರೆಸ್ ಕಚೇರಿಗೆ ಲೇಸು'

Rashmi Kasaragodu
Updated On : 7 Sept 2013, 11:56 am

ಹಾಸನ: ನ್ಯಾಯಾಲಯದ ತಡೆಯಾಜ್ಞೆ ಆದೇಶ ಕೈಸೇರದಿದ್ದರೂ ಬೇಲೂರು ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯನ್ನು ರದ್ದು ಮಾಡಿದ ಅಲ್ಲಿನ ತಹಸೀಲ್ದಾರ್ ಅವರನ್ನು ಕಾಂಗ್ರೆಸ್ ಕಚೇರಿಗೆ ನಿಯೋಜನೆ ಮಾಡುವುದು ಸೂಕ್ತ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಟೀಕಿಸಿದ್ದಾರೆ. ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೆ. 6 ರಂದು  ಬೆಳಗ್ಗೆ 9 ರಿಂದ 11 ಎಂದು ನಿಗದಿಪಡಿಸಿದ ತಹಸೀಲ್ದಾರ್ ಬೆಳಗ್ಗೆ 10.45 ಕ್ಕೆ ಬರುತ್ತಾರೆ.  ನ್ಯಾಯಾಲಯದ ಆದೇಶವನ್ನು ಸಂಬಂಧಪಟ್ಟವರು ತಲುಪಿಸದಿದ್ದರೂ ತಹಸೀಲ್ದಾರ್ ಅವರೇ ಕಂಪ್ಯೂಟರ್ನಿಂದ ತೆಗೆಯುವ ಯತ್ನ ಮಾಡುತ್ತಾರೆ. ಇದು ತರವಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement