ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ಕಳವು
ಜಾವಗಲ್: ಹೋಬಳಿಯ ಉಂಡಿಗನಾಳು ಗ್ರಾಮದ ಶಿವಕುಮಾರ್ ಎಂಬುವರ ಮನೆಯಲ್ಲಿ 1.8 ಲಕ್ಷ ರು. ಮೌಲ್ಯದ ಚಿನ್ನಾಭರಣ ಕಳುವಾಗಿದೆ. ಶಿವಕುಮಾರ್ ಮನೆಗೆ ಬೀಗ ಹಾಕಿಕೊಂಡು, ನಾಮಕರಣ ಪ್ರಯುಕ್ತ ಪತ್ನಿಯ ತವರುಮನೆ ತಿಪಟೂರು ತಾಲೂಕಿನ ಆಲದಹಳ್ಳಿಗೆ ಕುಟುಂಬ ಸಮೇತ ಹೋಗಿದ್ದಾಗ ಈ ಘಟನೆ ನಡೆದಿದೆ. ಕಳ್ಳರು ಮನೆಯ ಹೆಂಚು ತೆಗೆದು ಅಟ್ಟದ ಮೇಲೆ ಕಬ್ಬಿಣದ ಟ್ರಂಕ್ನಲ್ಲಿಟ್ಟಿದ್ದ 20 ಗ್ರಾಂನ ಚಿನ್ನದ ಚೈನ್, 16 ಗ್ರಾಂನ ಚಿನ್ನದ ಚೈನ್, 10 ಗ್ರಾಂನ 1 ಚಿನ್ನದ ಉಂಗುರ ಕಳವು ಮಾಡಿದ್ದಾರೆ. ಈ ಬಗ್ಗೆ ಶಿವಕುಮಾರ್ ಜಾವಗಲ್ ಪೊಲೀಸರಿಗೆ ದೂರು ನೀಡಿದ್ದಾರೆ. ಅರಸೀಕೆರೆ ಗ್ರಾಮಾಂತರ ಸಿಪಿಐ ಆರ್.ವಿ.ಗಂಗಾಧರಪ್ಪ, ಎಎಸ್ಐ ಶಿವರುದ್ರಪ್ಪ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.