ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸಕಲೇಶಪುರ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಜೆಡಿಎಸ್ ಮಡಿಲಿಗೆ

Rashmi Kasaragodu
Updated On : 7 Sept 2013, 11:54 am

ಕ.ಪ್ರ. ವಾರ್ತೆ೤ ಸಕಲೇಶಪುರ೤ ಸೆ. 7
ಪುರಸಭೆ ನೂತನ ಅಧ್ಯಕ್ಷರಾಗಿ ಜೆಡಿಎಸ್ನ ಸತೀಶ್ ಹಾಗೂ ಉಪಾಧ್ಯಕ್ಷರಾಗಿ ಮುಖೇಶ್ಶೆಟ್ಟಿ ಆಯ್ಕೆಯಾಗಿದ್ದಾರೆ. ಶನಿವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ನ ಸಯ್ಯದ್ಮಫೀಜ್ ಹಾಗೂ ಜೆಡಿಎಸ್ನಿಂದ ಸತೀಶ್ ನಾಮಪತ್ರ ಸಲ್ಲಿಸಿದ್ದರು.
ಕೈ ಎತ್ತುವ ಮೂಲಕ ನಡೆದ ಆಯ್ಕೆಯಲ್ಲಿ ಶಾಸಕರು ಸೇರಿದಂತೆ ಸತೀಶ್ ಪರವಾಗಿ 14 ಸದಸ್ಯರು ಹಾಗೂ ಸಯ್ಯದ್ ಮಫೀಜ್ ಪರವಾಗಿ 6 ಸದಸ್ಯರು ಕೈ ಎತ್ತಿದರು.  ಸತೀಶ್ ಅಧ್ಯಕ್ಷರಾಗಿ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕಾಗಿ ಕರ್ನಾಟಕ ಜನತಾ ಪಕ್ಷದ ರೇಖಾ ಹಾಗೂ ಜೆಡಿಎಸ್ನ  ಮುಖೇಶ್ಶೆಟ್ಟಿ ನಾಮಪತ್ರ ಸಲ್ಲಿಸಿದ್ದರು. ಅಂತಿಮವಾಗಿ ಮುಖೇಶ್ ಶೆಟ್ಟಿ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಚುನಾವಣೆ ಅಧಿಕಾರಿಯಾಗಿ ತಹಸಿಲ್ದಾರ್ ಬಾಬು ದೇವಾಡಿಗ ಕಾರ್ಯ ನಿರ್ವಹಿಸಿದರು.ಅಧ್ಯಕ್ಷರ ಚುನಾವಣೆ ಪ್ರಕ್ರಿಯೆ ಪ್ರಾರಂಭಗೊಂಡಾಗಿನಿಂದ ಜೆಡಿಎಸ್ನ 13 ಸದಸ್ಯರು ರೆಸಾರ್ಟ್ಮೊರೆ  ಹೊಗಿದ್ದು ಹೋಗಿದ್ದು, ಶನಿವಾರ ಶಾಸಕ ಎಚ್.ಕೆ ಕುಮಾರಸ್ವಾಮಿ ನೇತೃತ್ವದಲ್ಲಿ, ಎಲ್ಲಾ ಜೆಡಿಎಸ್ ಸದಸ್ಯರು ನೇರವಾಗಿ ಪುರಸಭೆ ಅವರಣಕ್ಕೆ ಆಗಮಿಸುವ ಮೂಲಕ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.
ಅಧ್ಯಕ್ಷ ಮತ್ತು ಉಧ್ಯಕ್ಷಕರ ಆಯ್ಕೆ ನಂತರ ಶಾಸಕ ಕುಮಾರಸ್ವಾಮಿಯವರೊಂದಿಗೆ ಜೆಡಿಎಸ್ ಕಾರ್ಯಕರ್ತರು ಅಭಿಮಾನಿಗಳು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಸಕಲೆಶಪುರ ಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ಮುಖಂಡರಾದ ದೊಡ್ಡದೀಣೆ ಸ್ವಾಮಿ,ಎಚ್.ಪಿ ಯಜಮಾನ್, ಯಾದ್ಗಾರ್ ಇಬ್ರಾಹಿಂ, ಸುಪ್ರದೀಪ್ ಜಮಾನ್, ಸಚಿನ್ ಪ್ರಸಾದ್ ಇದ್ದರು.
ನಂತರ ನಡೆದ ಸಂಭ್ರಮಾಚರಣೆಯಲ್ಲಿ 8 ರಿಂದ 12 ವಯಸ್ಸಿನ ಬಾಲಕರು ಡ್ರಂ ಸೆಟ್ ಬಾರಿಸುವ ಮೂಲಕ ಸಂಭ್ರಮಾಚರಣೆಗೆ ಮೆರುಗು ನೀಡಿದರು. ಆದರೆ, ಬಾಲಕರಿಂದ ಹೀಗೆ ಮಾಡಿಸುವುದುದು ಅಪರಾಧವಲ್ಲವೇ ಎಂಬುದು ಕೆಲವರ ಪ್ರಶ್ನೆಯಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement