ಹಾಸನದಲ್ಲಿ ಭಾರಿ ಮಳೆ: ಹಬ್ಬದ ಖರೀದಿಗೆ ಅಡಚಣೆ
ಹಾಸನ: ಸ್ವರ್ಣಗೌರಿ ಹಬ್ಬ ಮುನ್ನಾ ದಿನವಾದ ಶನಿವಾರ ಹಾಸನ ನಗರದಲ್ಲಿ ಭಾರಿ ಮಳೆಯಾಗಿ, ಜನ ಜೀವನ ಅಸ್ತವ್ಯಸ್ಥಗೊಂಡಿತ್ತು. ಮಧ್ಯಾಹ್ನ ಇದ್ದಕ್ಕಿಂತೆ ಭಾರಿ ಮಳೆಯಾದ ಪರಿಣಾಮ ರಸ್ತೆಗಳಲ್ಲಿ ಮತ್ತು ಚರಂಡಿಗಳಲ್ಲಿ ನೀರು ನುಗ್ಗಿ ಸಂಚಾರಕ್ಕೆ ಅಡಚಣೆ ಉಂಟಾಯಿತು. ಮಳೆ ನೀರು ನಗರದ ಎನ್.ಆರ್.ವೃತ್ತ, ಹಳೇ ಶಾಂತಿಸ್ಟೋರ್ಸ್ ರಸ್ತೆ ಸೇರಿದಂತೆ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಕೆರೆಯ ರೀತಿಯಲ್ಲಿ ನಿರ್ಮಾಣವಾಗಿತ್ತು. ಹೆಚ್ಚು ಕಾಲ ಸುರಿದ ಮಳೆಯಿಂದ ಸಂಚಾರಕ್ಕೆ ಹಾಗೂ ಮುಖ್ಯವಾಗಿ ಹಬ್ಬಕ್ಕೆ ವಸ್ತುಗಳ ಖರೀದಿಗೆ ಅಡಚಣೆ ಉಂಟಾಯಿತು.