ಗೌರಿ-ಗಣೇಶ ವಿಸರ್ಜನೆಗೆ ಟ್ರ್ಯಾಕ್ಟರ್ ವ್ಯವಸ್ಥೆ
ಹಾಸನ: ಸಾರ್ವಜನಿಕರು ಗೌರಿ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲು ಹಾಸನ ನಗರಸಭೆಯಿಂದ ನಗರದ ನಾನಾ ಕಡೆ ಟ್ರ್ಯಾಕ್ಟರ್ ವ್ಯವಸ್ಥೆ ಮಾಡಲಾಗಿದೆ ಎಂದು ನಗರಸಭೆ ಆಯುಕ್ತರು ತಿಳಿಸಿದ್ದಾರೆ. ಹಾಸನಾಂಬ ದೇವಸ್ಥಾನ ಮುಂಭಾಗ, ಸರ್ಕಾರಿ ಹೈಸ್ಕೂಲ್ ಆವರಣ, ಮಲ್ನಾಡ್ ನರ್ಸಿಂಗ್ ಹೋಂ ರಸ್ತೆ, ಶಂಕರಮಠ ಮುಂಭಾಗ, ಆದಿ ಚುಂಚನಗಿರಿ ಕಲ್ಯಾಣ ಮಂಟಪ,ಉಡಸಲಮ್ಮ ದೇವಸ್ಥಾನದ ಹಿಂಭಾಗ ಕರಿಗೌಡ ಕಾಲೋನಿ, ಮಿನಿ ವಿಧಾನ ಸೌಧ ಕುವೆಂಪು ನಗರ, ಗಣಪತಿ ದೇವಸ್ಥಾನ ಹೌಸಿಂಗ್ ಬೋರ್ಡ್,ಅರಳೀಮರದ ವೃತ್ತ ಗೌರಿ ಕೊಪ್ಪಲು, ಬಸವೇಶ್ವರ ಕಲ್ಯಾಣ ಮಂಟಪ, ಗಣಪತಿ ದೇವಸ್ಥಾನ ಪಿ.ಅಂಡ್.ಟಿ ಕಾಲೋನಿ, ಸುಬ್ರಹ್ಮಣ್ಯೇಶ್ವರ ದೇವಸ್ಥಾನ ಶಾಂತಿ ನಗರ, ಕಾಳಮ್ಮ ದೇವಸ್ಥಾನ ಹತ್ತಿರ ಸಿದ್ದಯ್ಯ ನಗರ, ಶಿವಲಿಂಗೇಶ್ವರ ಮಠ ತಣ್ಣೀರು ಹಳ್ಳ,ಆಕಾಶವಾಣಿ ಮುಂಭಾಗ ಸಾಲಗಾಮೆ ರಸ್ತೆ,ದೇವಿಗೆರೆ ವೃತ್ತ ಹಾಸನ ಇಲ್ಲಿ ವ್ಯವಸ್ಥೆ ಮಾಡಲಾಗಿದೆ.