ಪಾಲಿಟೆಕ್ನಿಕ್ ಉಪನ್ಯಾಸಕರ ವರ್ಗ ರದ್ದಿಗೆ ಮನವಿ
ಕನ್ನಡಪ್ರಭ ವಾರ್ತೆ ಹಾಸನ ಸೆ. 8
ನಗರದ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ನ ಇಬ್ಬರು ಉಪನ್ಯಾಸಕರ ವರ್ಗಾವಣೆ ರದ್ದು ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ.ಮಹದೇವಪ್ಪ ಅವರಿಗೆ ಇತ್ತೀಚೆಗೆ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು.
ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಉಪನ್ಯಾಸಕಿ ಲಲಿತಮ್ಮ ಅವರನ್ನು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿಗೆ ವರ್ಗಾವಣೆ ಮಾಡಲಾಗಿದೆ. ಅಲ್ಲದೆ ಇದೇ ಕಾಲೇಜಿನ ಉಪನ್ಯಾಸಕ ಎಸ್. ನಾಗರಾಜ್ ಅವರನ್ನು ಏಕಾಏಕಿ ಕಾರವಾರಕ್ಕೆ ವರ್ಗಾವಣೆ ಮಾಡಲಾಗಿದೆ. ಕೂಡಲೇ ಅವರ ವರ್ಗಾಣೆ ರದ್ದು ಮಾಡುವಂತೆ ಕೋರಿದರು.
ಹಲವು ವರ್ಷಗಳಿಂದ ಇಲ್ಲಿನ ಕಾಲೇಜಿನಲ್ಲೇ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದು, 2016 ಕ್ಕೆ ಇಲ್ಲಿಯೇ ನಿವೃತ್ತಿ ಹೊಂದುತ್ತಿದ್ದರು.
ಆದರೆ ಉಳಿದ ಮೂರು ವರ್ಷಕ್ಕಾಗಿ ಬೇರೆಡೆ ವರ್ಗಾವಣೆ ಏಕೆ ಮಾಡಲಾಯಿತು. ಕೂಡಲೇ ವರ್ಗಾವಣೆ ಕೈಬಿಡುವಂತೆ ಮನವಿ ಮಾಡಿದರು. ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ವಿದ್ಯಾರ್ಥಿನಿಯರು ಇದ್ದರು.