ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸಂಭ್ರಮದ ಸ್ವರ್ಣಗೌರಿ ಹಬ್ಬ

Mainashree
Updated On : 8 Sept 2013, 8:58 am

ಕ.ಪ್ರ.ವಾರ್ತೆ೤ ಹಾಸನ೤ ಸೆ. 8
ಸ್ವರ್ಣಗೌರಿ ಹಬ್ಬವನ್ನು ಭಾನುವಾರ ನಗರ ಸೇರಿ ಜಿಲ್ಲಾದ್ಯಂತ ಸಡಗರ, ಸಂಭ್ರಮ, ಶ್ರದ್ಧಾಭಕ್ತಿಯಿಂದ  ಆಚರಿಸಲಾಯಿತು. ಮಹಿಳೆಯರು, ಮಕ್ಕಳು ಬಣ್ಣ ಬಣ್ಣದ ಹೊಸ ಉಡುಪುಗಳನ್ನು ತೊಟ್ಟು ಸ್ವರ್ಣ ಗೌರಿಯನ್ನು ಪ್ರತಿಷ್ಠಾಪಿಸಿ ಬಗೆ ಬಗೆಯ ಹೂವುಗಳು ವಸ್ತ್ರ ಸೇರಿದಂತೆ ಚೆಂದದಿಂದ ಅಲಂಕರಿಸಿ, ವಿಶೇಷ ಪೂಜೆ ಸಲ್ಲಿಸಿ ಗೌರಿ ಕೃಪೆಗೆ ಪಾತ್ರರಾದರು.
ನಗರದ ಹೇಮಾವತಿ ಬಡಾವಣೆಯಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಸ್ವರ್ಣಗೌರಿಛಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಿದರು. ಗೌರಿ ವಿಗ್ರಹ ಎದುರು ಕಳಸ ಇಟ್ಟು ಪೂಜಿಸಿದರು. ಮಹಿಳೆಯರು, ಮಕ್ಕಳು ಕೈಯಿಗೆ ಅರಿಶಿನದ ದಾರ ಕಟ್ಟಿಕೊಂಡು ಸ್ವರ್ಣಗೌರಿಗೆ ಮರದ ಬಾಗಿನ ಅರ್ಪಿಸಿದರು.
ಬೆಳಗ್ಗೆಯಿಂದಲೇ ದೇವಾಲಯಗಳಲ್ಲಿ ಗೌರಮ್ಮನನ್ನು ಪ್ರತಿಷ್ಠಾಪಿಸಿ ನಾನಾ ರೀತಿಯ ಹೂವಿನ ಅಲಂಕಾರದಿಂದ ಸಿಂಗಾರಗೊಳಿಸಿ ಮಹಿಳೆಯರು ಪೂಜೆ ಸಲ್ಲಿಸಿ ಇಷ್ಟಾರ್ಥಗಳನ್ನು ಕರುಣಿಸುವಂತೆ ದೇವಿಯನ್ನು ಬೇಡಿದರು. ಸ್ವರ್ಣಗೌರಿ ಹಬ್ಬದಂದು ನಗರಾದ್ಯಂತ ಉತ್ತಮ ಮಳೆಯಾಗಿದ್ದರಿಂದ ಜನರು ಹರ್ಷಚಿತ್ತರಾದರು.
ಪ್ರತಿವರ್ಷದಂತೆ ಈ ಬಾರಿಯೂ ಜನರು ಹಬ್ಬವನ್ನು ಭ್ರದ್ಧಾಭಕ್ತಿಯಿಂದ ಆಚರಿಸಿದರು. ಗೌರಿ ಹಬ್ಬವು ಮಹಿಳೆಯರು ಮತ್ತು ಮಕ್ಕಳದಲ್ಲಿ ಸಂತೋಷ ಮೂಡಿದೆ. ಮಹಿಳೆಯರನ್ನು ಕುಂಕುಮಕ್ಕೆ ಆಹ್ವಾನಿಸಿ ಹರಕೆ ಒಪ್ಪಿಸಿ ಬಾಗಿನ ನೀಡಿದರು. ದೇವಾಲಯಗಳಲ್ಲಿ ಸ್ವರ್ಣಗೌರಿಗೆ ಸಂಪ್ರದಾಯ ಬದ್ದವಾಗಿ ಬಾಗಿನ ಅರ್ಪಿಸಿ ಗೌರಿ ದರ್ಶನ ಪಡೆದು ಪುನೀತರಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement