ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕೇಂದ್ರೀಯ ವಿದ್ಯಾರ್ಥಿ ರಾಣಿಗೆ ಚಿನ್ನ, ಬೆಳ್ಳಿ ಪದಕ

Rashmi Kasaragodu
Updated On : 11 Sept 2013, 1:04 am

ಹಾಸನ: ಇಲ್ಲಿನ ಕೇಂದ್ರೀಯ ವಿದ್ಯಾಲಯದ 10ನೇ ತರಗತಿ ವಿದ್ಯಾರ್ಥಿನಿ ವಿ.ಎಸ್. ರಾಣಿ ಇತ್ತೀಚೆಗೆ  ಮಂಗಳೂರಿನಲ್ಲಿ ಕೇಂದ್ರೀಯ ವಿದ್ಯಾಲಯದ ಪ್ರಾಂತೀಯ  ವಿಭಾಗದಲ್ಲಿ ನಡೆದ ಈಜು ಸ್ಪರ್ಧೆಯಲ್ಲಿ 1 ಚಿನ್ನದ ಪದಕ,  2 ಬೆಳ್ಳಿ  ಪದಕಗಳನ್ನು  ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
200 ಮೀ. ಬಟರ್ ಫ್ಲೇ  ಸ್ಟ್ರೋಕ್ನಲ್ಲಿ  ಪ್ರಥಮ ಸ್ಥಾನ ಪಡೆದು, ಚಿನ್ನದ ಪದಕ, 800 ಮೀ.  ಪ್ರೀಸ್ಟೈಲ್ನಲ್ಲಿ  ದ್ವಿತೀಯ ಸ್ಥಾನ ಪಡೆದು  ಬೆಳ್ಳಿ ಪದಕ,  400 ಮೀ. ಇಂಡಿವಿಜಿಯಲ್ ಮೆಡ್ಲೆನಲ್ಲಿ  ಬೆಳ್ಳಿ ಪದಕ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಈ ಮೂಲಕ ಅಕ್ಟೋಬರ್ನಲ್ಲಿ  ಚಂಡೀಘಡದಲ್ಲಿ ನಡೆಯುವ ರಾಷ್ಟ್ರಮಟ್ಟದ  ಈಜು ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ರಕ್ಷಿತ್ ಪ್ರಸಾದ್ ಹಾಸನಾಂಬ ಸ್ವಿಮರ್ಸ್ ಕ್ಲಬ್ ಈಜುಪಟುವಾಗಿದ್ದು, ಹಾಸನಾಂಬ ಒಳಾಂಗಣ ಈಜು ಕ್ರೀಡಾಂಗಣದಗಲ್ಲಿ ಈಜು ತರಬೇತುದಾರ ಲಕ್ಷ್ಮೀಕಾಂತ್, ಬ್ರಿಜೇಷ್, ಮಲ್ಲಿಕಾರ್ಜುನ್, ಶಿವಕುಮಾರ್, ನಾಗರಾಜು ಅವರಲ್ಲಿ ಈಜು ತರಬೇತಿ ಪಡೆಯುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement