ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಜೆಡಿಎಸ್ ವರಿಷ್ಠರಿಗೆ ಅಸ್ತಿತ್ವದ ಆತಂಕ, ಚಡಪಡಿಕೆ: ಶಿವರಾಂ

Rashmi Kasaragodu
Updated On : 11 Sept 2013, 1:04 am

ಕ.ಪ್ರ.ವಾರ್ತೆ೤ ಬೇಲೂರು೤ ಸೆ.10
ಉಪ ಚುನಾವಣೆ ನಂತರ ಜೆಡಿಎಸ್ ವರಿಷ್ಠರಿಗೆ ತಮ್ಮ ಅಸ್ತಿತ್ವದ ಬಗ್ಗೆ ಆತಂಕಗೊಂಡಿದ್ದು, ಹತಾಶೆಯಿಂದ ಚಡಪಡಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಶಿವರಾಂ ಹೇಳಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇಲೂರು ಪುರಸಭೆಯಲ್ಲಿ ಈವರೆಗೆ ಪರಿಶಿಷ್ಟ ಮಹಿಳೆಗೆ ಅಧ್ಯಕ್ಷ ಸ್ಥಾನ ಮೀಸಲು ನಿಗದಿಯಾಗಿಲ್ಲ. ಹಾಗಾಗಿ ಸದಸ್ಯೆ ಶಾಂತಮ್ಮ ನ್ಯಾಯಾಲಯ ಮೊರೆ ಹೋದರು. ನ್ಯಾಯಾಲಯ ಇದೀಗ ತಡೆಯಾಜ್ಞೆ ನೀಡಿದೆ. ಇದನ್ನು ಗೌರವಿಸದ ಜೆಡಿಎಸ್ ಪ್ರಮುಖರು ಚುನಾವಣಾಧಿಕಾರಿ ಮೇಲೆ ಒತ್ತಡ ಹೇರಿ ಅಧಿಕಾರ ಹಿಡಿಯುವ ಆಸೆಯಿಂದ ಇಲ್ಲದ ತಂತ್ರಗಾರಿಕೆ ನಡೆಸುತ್ತಿದ್ದಾರೆ. ಕೋರ್ಟ್ ಮುಂದೆ ಅವರ ಯಾವ ಆಟವೂ ನಡೆಯುವುದಿಲ್ಲ ಎಂದು ತಿಳಿಸಿದರು.
ಸರ್ಕಾರದ ವೆಬ್ಸೈಟ್ನಲ್ಲಿ ತಡೆಯಾಜ್ಞೆ ಪ್ರತಿ ದೊರೆಯುತ್ತದೆ. ಅದಕ್ಕಾಗಿಯೇ ವೆಬ್ಸೈಟ್
ರೂಪಿಸಲಾಗಿದೆ. ಇದನ್ನು ಅರಿಯದ ಜೆಡಿಎಸ್ ನಾಯಕರು ಏನೇನೊ ತಕರಾರು ತೆಗೆಯುತ್ತಿದ್ದಾರೆ. ಪುರಸಭೆ ಆಡಳಿತ ಕೈತಪ್ಪಿತಲ್ಲ ಎಂಬ ದುಗುಡದಿಂದ ಕಾಂಗ್ರೆಸ್ ಅನ್ನು ದೂಷಿಸುತ್ತಿದ್ದಾರೆ ಎಂದು ಹೇಳಿದರು. ಜೆಡಿಎಸ್ನವರು ಯಾವ ಸಮಯದಲ್ಲಿ ಯಾರೊಟ್ಟಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆಂಬುದೂ ಅರ್ಥವಾಗುವುದಿಲ್ಲ.
ಆದರೆ ಇದನ್ನು ಜನ ಗಮನಿಸುತ್ತಿದ್ದಾರೆ. ಬಿಜೆಪಿಯೊಂದಿಗಿನ ಹೊಂದಾಣಿಕೆಯಿಂದ ರಾಜ್ಯದ ಅಲ್ಪಸಂಖ್ಯಾತರು ಕಾಂಗ್ರೆಸ್ನತ್ತ ವಾಲುತ್ತಿದ್ದಾರೆ ಎಂದು ಹೇಳಿದರು.  ಬ್ಲಾಕ್ ಅಧ್ಯಕ್ಷ ದಾಮೋದರ್, ಪುರಸಭೆ ಸದಸ್ಯ ಎಂ.ಆರ್.ವೆಂಕಟೇಶ್, ಜುಬೇರ್ಅಹ್ಮದ್, ಸತೀಶ್, ಅಕ್ರಮ್ಪಾಷಾ, ಮಾಜಿ ಸದಸ್ಯ ಅಶೋಕ್, ಜಮಾಲುದ್ದೀನ್, ತಾಪಂ ಮಾಜಿ ಅಧ್ಯಕ್ಷ ಜಯಮೂರ್ತಿ, ಯುವರಾಜ್ ಇತರರು ಇದ್ದರು.


ಬೇಲೂರು ಪುರಸಭೆಯಲ್ಲಿ ಈವರೆಗೆ ಪರಿಶಿಷ್ಟ ಮಹಿಳೆಗೆ ಅಧ್ಯಕ್ಷ ಸ್ಥಾನ ಮೀಸಲು ನಿಗದಿಯಾಗಿಲ್ಲ. ಹಾಗಾಗಿ ಸದಸ್ಯೆ ಶಾಂತಮ್ಮ ನ್ಯಾಯಾಲಯ ಮೊರೆ ಹೋದರು. ನ್ಯಾಯಾಲಯ ಇದೀಗ ತಡೆಯಾಜ್ಞೆ ನೀಡಿದೆ. ಇದನ್ನು ಗೌರವಿಸದ ಜೆಡಿಎಸ್ ಪ್ರಮುಖರು ಚುನಾವಣಾಧಿಕಾರಿ ಮೇಲೆ ಒತ್ತಡ ಹೇರಿ ಅಧಿಕಾರ ಹಿಡಿಯುವ ಆಸೆಯಿಂದ ಇಲ್ಲದ ತಂತ್ರಗಾರಿಕೆ ನಡೆಸುತ್ತಿದ್ದಾರೆ. ಕೋರ್ಟ್ ಮುಂದೆ ಅವರ ಯಾವ ಆಟವೂ ನಡೆಯುವುದಿಲ್ಲ
ಟಿ  ಬಿ.ಶಿವರಾಂ, ಕಾಂಗ್ರೆಸ್ ಜಿಲ್ಲಾಧ್ಯಕ್ಷ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement