ರಾಸುಗಳಿಗೆ ಆರೋಗ್ಯ ಉಚಿತ ತಪಾಸಣೆ
ಚನ್ನರಾಯಪಟ್ಟಣ: ತಾಲೂಕಿನ ಉದಯಪುರ ಸಮೀಪ ಇರುವ ಊಪಿನಹಳ್ಳಿ ಗ್ರಾಮದಲ್ಲಿ ಹಾಸನ ಕೃಷಿ ವಿಶ್ವವಿದ್ಯಾನಿಲಯದ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ರಾಸುಗಳಿಗೆ ಉಚಿತವಾಗಿ ಆರೋಗ್ಯ ತಪಾಸಣಾ ಶಿಬಿರ 6 ಪಶು ವೈದ್ಯರ ನೇತೃತ್ವದಲ್ಲಿ ನಡೆಯಿತು.ಉದಯಪುರದ ಪಶುವೈದ್ಯ ಡಾ.ಪ್ರವೀಣ್ಕುಮಾರ್, ಡಾ.ಪ್ರಸನ್ನ ಮತ್ತು ಇನ್ನಿತರ ಪಶು ವೈದ್ಯರು ಶಿಬಿರದಲ್ಲಿ ಉಚಿತವಾಗಿ ದನ, ಕರು, ಕುರಿ ಟಗರುಗಳಿಗೆ ವರ್ಷದ ರೋಗ ನಿರೋಧಕ ಲಸಿಕೆಯನ್ನು ನೀಡಿದರು.ನಂತರ ಹಸುಗಳ ಗರ್ಭಧಾರಣೆಯ ಪರೀಕ್ಷೆ ನಡೆಸಿದರು. ಪಶು ವೈದ್ಯರು ಅನಾರೋಗ್ಯದಿಂದ ಬಳಲುತ್ತಿದ್ದ ಹಸುಗಳನ್ನು ಗಮನವಾಗಿ ಪರೀಕ್ಷಿಸಿ ಸೂಕ್ತವಾದ ಔಷಧಿಗಳನ್ನು ಉಚಿತವಾಗಿಯೇ ನೀಡಿದರು. ಪಶುಗಳಿಗೆ ಉತ್ತ ಆಹಾರವನ್ನು ನೀಡಲು ಸೂಚಿಸಿದರು.