ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

10 ಅಡಿ ಎತ್ತರದ ಗಣೇಶ ಮೂರ್ತಿ ಪ್ರತಿಷ್ಠಾಪನೆ

Rashmi Kasaragodu
Updated On : 12 Sept 2013, 12:02 pm

ಹೊಳೆನರಸೀಪುರ: ಹೊಳೆನರಸೀಪುರದಲ್ಲಿ ಶ್ರೀ ಮಹಾಗಣಪತಿ ಮಹೋತ್ಸವ ಸೇವಾ ಸಮಿತಿಯು ಆಯೋಜಿಸಿರುವ 56ನೇ ವರ್ಷದ ಆಚರಣೆಯ ಪ್ರಯುಕ್ತ ವಿಶೇಷ ಆಕರ್ಷಣೆಯುಳ್ಳ 10 ಅಡಿ ಎತ್ತರದ ಗಣೇಶಮೂರ್ತಿಯನ್ನು ಇತ್ತೀಚೆಗೆ ಪ್ರತಿಷ್ಠಾಪಿಸಲಾಯಿತು.
ಮಹೋತ್ಸವದ ಅಂಗವಾಗಿ ನಾಡಿನ ಪ್ರಖ್ಯಾತ ಕಲಾವಿದರು, ಹರಿಕಥಾ ವಿದ್ವಾಂಸರಿಂದ ವಿಶೇಷ ಕಾರ್ಯಕ್ರಮ ಕೊಡುವ ಉದ್ದೇಶದಿಂದ ಉತ್ತಮ ಗುಣಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸಮಿತಿಯ ಕಾರ್ಯಾಧ್ಯಕ್ಷ ಟಿ. ಶಿವಕುಮಾರ್ ತಿಳಿಸಿದರು.
ಕಳೆದ ವರ್ಷ ಸುಮಾರು ಒಂದು ತಿಂಗಳ ಕಾಲ ನಡೆದ ಕಾರ್ಯಕ್ರಮಕ್ಕೆ 17 ಲಕ್ಷ ವೆಚ್ಚ ಮಾಡಿದ್ದರ ಫಲದಿಂದ ಉತ್ತಮ ಕಾರ್ಯಕ್ರಮ ನೀಡಲು ಸಾಧ್ಯವಾಯಿತೆಂದು ನುಡಿದರು. ಅಲ್ಲದೇ ಈ ಎಲ್ಲಾ ಕಾರ್ಯಕ್ರಮಗಳಿಗೂ ಧನ-ಧಾನ್ಯದ ರೂಪದಲ್ಲಿ ಸಹಕರಿಸಿದ ಎಲ್ಲಾ ದಾನಿಗಳಿಗೂ ಕೃತಜ್ಞತೆ ಅರ್ಪಿಸಿದ ಅವರು, ಈ ವರ್ಷವೂ ಸಹ ಸಾರ್ವಜನಿಕರಿಗೆ ಸದಭಿರುಚಿಯ ಹಾಗೂ ಜನಪ್ರಿಯ ಕಾರ್ಯಕ್ರಮಗಳನ್ನು ನೀಡುವ ಉದ್ದೇಶದಿಂದ ಈ ಭಾರಿ ಉತ್ತಮ ಕಾರ್ಯಕ್ರಮಗಳನ್ನು ನೀಡುತ್ತಿರುವುದಾಗಿ ತಿಳಿಸಿದರು.
ಸಭೆಯಲ್ಲಿ ಹಾಜರಿದ್ದ ಬಹುತೇಕ ಸದಸ್ಯರು, ಕಳೆದ ಸಾಲಿನಲ್ಲಿ ಕಂಡುಬಂದ ಸಣ್ಣಪುಟ್ಟ ವ್ಯತ್ಯಾಸಗಳನ್ನು ಸರಿಪಡಿಸಿಕೊಂಡು ಈ ಭಾರಿಯ ಕಾರ್ಯಕ್ರಮಗಳನ್ನು ನೀಡಲು ಮುಂದಾಗುವಂತೆ ಸಲಹೆ ನೀಡಿದರು. ಅಲ್ಲದೇ ಕಾರ್ಯಕ್ರಮಗಳ ಗುಣಮಟ್ಟ, ಪ್ರಸಾದ ವಿನಿಯೋಗ, ಕಾರ್ಯಕ್ರಮಗಳ ಪಟ್ಟಿಯಲ್ಲಿ ಪ್ರಾಯೋಜಕರ ವಿವರ ಪ್ರಕಟಿಸುವ ಸಂದರ್ಭದಲ್ಲಿನ ನ್ಯೂನತೆಗಳು, ಪ್ರಚಾರ ಜಾಹೀರಾತಿನ ವಿವರಗಳ ಕುರಿತಂತೆ ಸಲಹೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಸಮಿತಿ ಕಾರ್ಯದರ್ಶಿ ಎ.ಆರ್. ರವಿಕುಮಾರ್, ವೈ.ವಿ. ಚಂದ್ರಶೇಖರ್, ಕೋಶಾಧ್ಯಕ್ಷ ಎಚ್.ಎಸ್. ಸುದರ್ಶನ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಕೆ.ಎನ್. ರಾಮಚಂದ್ರ ಪುತ್ತೂರಾಯ, ಕೆ.ಬಿ. ವೆಂಕಟಸ್ವಾಮಿ, ಎಚ್.ಡಿ. ಗುರುಪ್ರಸಾದ್, ಪತ್ರಕರ್ತ ಎಚ್.ವಿ. ಸುರೇಶ್ಕುಮಾರ್, ಎಸ್.ಎ. ರಘು, ಪುರಸಭೆ ಸದಸ್ಯರು, ಪಿ. ನರಸಿಂಹಯ್ಯ, ಮುರುಳಿಧರ ಗುಪ್ತ ಸೇರಿದಂತೆ ಹಲವಾರು ಮಂದಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement