ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಎಲ್ಐಸಿ ಬೆಳೆಯಲು ನಂಬಿಕೆ ಮುಖ್ಯ: ಸೋಮಶೇಖರ್

Rashmi Kasaragodu
Updated On : 12 Sept 2013, 12:02 pm

ಸಕಲೇಶಪುರ: ನಂಬಿಕೆ ಹಾಗೂ ವಿಶ್ವಾಸದ ಮೂಲಕ ಭಾರತೀಯ ಜೀವ ವಿಮಾ ನಿಗಮ ಸಂಸ್ಥೆ ಬೃಹತಾಕಾರವಾಗಿ ಬೆಳೆಯಲು ಸಾಧ್ಯವಾಗಿದೆ ಎಂದು ಭಾರತೀಯ ಜೀವ ವಿಮಾ ನಿಗಮದ ಹಿರಿಯ ಶಾಖಾಧಿಕಾರಿ ಸೋಮಶೇಖರ್ ಹೇಳಿದ್ದಾರೆ.
ಬುಧವಾರ ಪಟ್ಟಣದ ಎಲ್ಐಸಿ ಕಚೇರಿಯಲ್ಲಿ ನಡೆದ ವಿಮಾ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಪೈಪೋಟಿ ಯುಗದಲ್ಲಿ ವಿಮಾ ಕ್ಷೇತ್ರಕ್ಕೆ ಹಲವು ಖಾಸಗಿ ಸಂಸ್ಥೆಗಳು ಕಾಲಿಟ್ಟರೂ ಭಾರತೀಯ ಜೀವ ವಿಮಾ ನಿಗಮದ ವ್ಯವಹಾರಕ್ಕೆ ಯಾವುದೇ ನಷ್ಟವಾಗಿಲ್ಲ. ಬದಲಾಗಿ ವರ್ಷದಿಂದ ವರ್ಷಕ್ಕೆ ಸಂಸ್ಥೆ ಹೆಚ್ಚಿನ ವ್ಯವಹಾರ ನಡೆಸುತ್ತಾ ಪ್ರಗತಿಯೆಡೆ ಸಾಗುತ್ತಿದೆ. ಇದು ಈ ಸಂಸ್ಥೆಯ ಮೇಲೆ ಜನರು ಹೊಂದಿರುವ ವಿಶ್ವಾಸವನ್ನು ತೋರುತ್ತಿದೆ ಎಂದರು.
ಶಾಖೆಯ ವ್ಯವಸ್ಥಾಪಕ ವೆಂಕಟರಾಯಪ್ಪ ಮಾತನಾಡಿ, ಸಾರ್ವಜನಿಕವಾಗಿ ಹಾಗೂ ಸರ್ವಕಾಲಿಕವಾಗಿ ಭಾರತಿಯ ಜೀವ ವಿಮಾ ನಿಗಮ ನಂಬಿಕೆಗೆ ಪಾತ್ರವಾಗಿರುವುದು ಪ್ರಗತಿಯ ಸಂಕೇತವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪುರಸಭೆ ಉಪಾಧ್ಯಕ್ಷ ಮುಖೇಶ್ ಶೆಟ್ಟಿ ಇದ್ದರು. ಈ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತರಾದ ನಾನಾ ಶಾಲೆಯ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಕೌಡಳ್ಳಿ ಗ್ರಾಮದ ರೋಟರಿ ಅಂಗವಿಕಲ ಶಾಲೆಯ ಮಕ್ಕಳಿಗೆ ಸಮವಸ್ತ್ರ ವಿತರಿಸಲಾಯಿತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement