ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕಾಫಿ ಕೀಟಗಳ ಹತೋಟಿ ಕ್ರಮ; ಸಲಹೆ

Rashmi Kasaragodu
Updated On : 11 Sept 2013, 11:57 am

ಕ.ಪ್ರ. ವಾರ್ತೆ ಟಿ ಹಾಸನ ಟಿ ಸೆ.11
ಕಾಫಿ ಬೆಳೆಯುವ ಕೆಲವು ಪ್ರದೇಶಗಳಲ್ಲಿ ಸತತವಾಗಿ ಸುರಿದ ಮುಂಗಾರು ಮಳೆಯು ಬಿಡುವು ಕೊಟ್ಟಿದೆ.
ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಅಧಿಕವಾಗಿ ಸುರಿದ ಮಳೆಯಿಂದ ಕಾಫಿ ಕಾಂಡದ ಒಳಗಡೆ ಬೋರರ್ ಲಾವರ್ಗಳ ಚಟುವಟಿಕೆಯು ಕುಂಠಿತವಾಗಿದ್ದು, ಕೆಲವು ಸತ್ತು ಹೋಗಿವೆ. ಕೀಟ ಪೀಡಿತ ಗಿಡಗಳನ್ನು ಗುರುತಿಸಿ ತೆಗೆಯಲು ಇದು ಸಕಾಲವಾಗಿದೆ ಎಂದು ಕಾಫಿ ಮಂಡಳಿಯ ಸಂಶೋಧನಾ ನಿರ್ದೇಶಕರು ತಿಳಿಸಿದ್ದಾರೆ.
ಪ್ರೌಢ ಕೀಟಗಳು ಈಗಾಗಲೇ ಕಾಂಡದಿಂದ ಹೊರಬರಲು ಸಿದ್ಧವಾಗಿರುವುದರಿಂದ ಕೀಟ ಪೀಡಿತ ಗಿಡಗಳನ್ನು ಗುರುತಿಸಿ ತೆಗೆದು ಕೂಡಲೇ ನಾಶ ಪಡಿಸಬೇಕು. ಇದರಿಂದ ಪ್ರೌಢ ಕೀಟಗಳಿಂದ ಕಾಫಿ ಗಿಡಗಳಿಗೆ ಉಂಟಾಗ ಬಹುದಾದ ಸಂಭವನೀಯ ಹಾನಿಯನ್ನು ತಪ್ಪಿಸಬಹುದು. ಅಲ್ಲದೆ ಈ ತಿಂಗಳ ಕೊನೆಯ ವಾರದಲ್ಲಿ ಅಥವಾ ಅಕ್ಟೋಬರ್ ತಿಂಗಳ ಮೊದಲನೇ ವಾರದಲ್ಲಿ ಮೋಹಕ ಬಲೆಗಳನ್ನು(ಫೆರಮೋನ್ ಟ್ರಾಪ್ಸ್) ಅಳವಡಿಸಬಹುದು. ಈ ಮೋಹಕ ಬಲೆಗಳು ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆಯಲ್ಲಿ ದೊರಕುತ್ತವೆ.
ಆಸಕ್ತಿಯುಳ್ಳ ಬೆಳೆಗಾರರು ಸ್ಥಳೀಯ ವಿಸ್ತರಣಾ ವಿಭಾಗದ ಸಂಪರ್ಕಾಧಿಕಾರಿಗಳ ಕ:ಕೇರಿಯನ್ನು ಸಂಪರ್ಕಿಸಿ ಅವಶ್ಯಕವಾದ ಮೋಹಕ ಬಲೆಗಳಿಗೆ ಬೇಡಿಕೆಯನ್ನು ಸಲ್ಲಿಸಬಹುದು. ಬೆಳೆದಿರುವ ಕಳೆಗಳನ್ನು ಸ್ವಚ್ಛವಾಗಿ ತೆಗೆಯುವುದರಿಂದ ಹನಕಲುಗಳನ್ನು ಹೆರಕಲು ತುಂಬಾ ಸಹಾಯಕಾರಿಯಾಗುತ್ತದೆ. ಕುಯಿಲು ಮಾಡುವಾಗ ಯಾವುದೇ ಕಾಫಿಯು ಗಿಡದಲ್ಲಿ ಉಳಿಯದಂತೆ ಎಚ್ಚರಿಕೆ ವಹಿಸಬೇಕು. ಕಾಯಿ ಹಣ್ಣಾದ ಕೂಡಲೇ ಯಾವುದೇ ವಿಳಂಬವಿಲ್ಲದೆ ಕುಯಿಲು ಮಾಡಬೇಕು. ಕುಯಿಲು ಮಾಡುವುದು ವಿಳಂಬವಾದಲ್ಲಿ ಕಾಯಿ ಕೊರಕದ ಹಾನಿಯ ತೀವ್ರತೆ ಹೆಚ್ಚಾಗುತ್ತದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement