ಕಾಫಿ ಬೀಜ ಸರಬರಾಜಿಗೆ ಅರ್ಜಿ ಆಹ್ವಾನ
ಹಾಸನ: ಅರೇಬಿಕಾ ಕಾಫಿ ತಳಿಗಳಾದ ಸೆಲೆಕ್ಷನ್- 795, ಸೆಲೆಕ್ಷನ್- 5ಎ, ಸೆಲೆಕ್ಷನ್- 5ಬಿ, ಸೆಲೆಕ್ಷನ್- 6, ಸೆಲೆಕ್ಷನ್- 7.3, ಸೆಲೆಕ್ಷನ್- 8, ಸೆಲೆಕ್ಷನ್- 9, ಸೆಲೆಕ್ಷನ್- 11 ಮತ್ತು ಚಂದ್ರಗಿರಿ ಹಾಗೂ ರೋಬಸ್ಟ್ ತಳಿಗಳಾದ ಸೆಲೆಕ್ಷನ್- 274 ಮತ್ತು ಸಿಆರ್ ಕಾಫಿ ಬೀಜದ ಸರಬರಾಜಿಗೆ 2013-14ನೇ ಸಾಲಿನಲ್ಲಿ ಕಾಫಿ ಮಂಡಳಿಯ ಕರ್ನಾಟಕ ವಲಯದ ವಿಸ್ತರಣಾ ವಿಭಾಗದ ಸಂಪರ್ಕಾಧಿಕಾರಿಗಳ ಕಚೇರಿಗಳಲ್ಲಿ ಅ.20ರ ತನಕ ಅರ್ಜಿಗಳನ್ನು ಸ್ವೀಕರಿಸಿ ನೋಂದಣಿ ಮಾಡಿಕೊಳ್ಳಲಾಗುತ್ತದೆ.
ಅರ್ಜಿಯೊಂದಿಗೆ ಅರೇಬಿಕಾ, ರೋಬಸ್ಟ್ ಕಾಫಿ ಬೀಜ ಕೆ.ಜಿ. ಒಂದಕ್ಕೆ 200 ರು.ನಂತೆ ಮುಂಗಡ ಹಣವನ್ನು ನಗದಾಗಿಯಾಗಲಿ ಅಥವಾ ಡಿಮ್ಯಾಂಡ್ ಡ್ರಾಫ್ಟ್ ಮೂಲಕವಾಗಿಯಾಗಲಿ ನೋಂದಣಿ ಮಾಡಲು ಪಾವತಿಸಬೇಕಾಗಿದೆ. ಡಿಮ್ಯಾಂಡ್ ಡ್ರಾಪ್ಟ್ ಅನ್ನು- ಕಾಫಿ ಬೋರ್ಡ್, ಜನರಲ್ ಫಂಡ್ ಪ್ಲಾನ್, ಫಂಡ್ ಅಕೌಂಟ್- ಹೆಸರಿನಲ್ಲಿ ತೆಗೆದು ಸ್ಥಳೀಯ ಮಂಡಳಿಯ ವಿಸ್ತರಣಾ ವಿಭಾಗದ ಕಚೇರಿಗಳಲ್ಲಿ ಅರ್ಜಿಯನ್ನು ನೋಂದಾಯಿಸಬಹುದು.
ಕಾಫಿ ಬೀಜದ ಸರಬರಾಜು ಸಂಬಂಧಪಟ್ಟ ಲಭ್ಯತೆಗೆ ಅನುಗುಣವಾಗಿದೆ. ಯಾವುದೇ ತರಹದ ಕಾಫಿ ಬೀಜದ ಬೇಡಿಕೆಯ ಕೋರಿಕೆ ಅರ್ಜಿಗಳನ್ನು ಕಾಫಿ ಮಂಡಳಿಯ
ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆಯಲ್ಲಾಗಲಿ ಅಥವಾ ಮಂಡಳಿಯ ಯಾವುದೇ ಪ್ರಾಂತೀಯ ಸಂಶೋಧನಾ ಸಂಸ್ಥೆಗಳಲ್ಲಾಗಲಿ ಸ್ವೀಕರಿಸಲಾಗುವುದಿಲ್ಲ, ನೋಂದಾಯಿಸಲಾಗುವುದಿಲ್ಲ ಎಂದು ಕಾಫಿ ಮಂಡಳಿ ಸಂಶೋಧನಾ ನಿರ್ದೇಶಕರು ತಿಳಿಸಿದ್ದಾರೆ.