ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ದೊಡ್ಡಾಸ್ಪತ್ರೆಗೆ ಕಾರ್ಯವೈಖರಿ ಬಗ್ಗೆ ಲೋಕಾಯುಕ್ತ ಎಸ್ಪಿ ಡಾ. ವೇದಮೂರ್ತಿ ಅಸಮಾಧಾನ

Rashmi Kasaragodu
Updated On : 12 Sept 2013, 12:02 pm

ಕನ್ನಡಪ್ರಭ ವಾರ್ತೆ, ಹಾಸನ. ಸೆ.11
ನಗರದ ಶ್ರೀ ಚಾಮರಾಜೇಂದ್ರ ಸರ್ಕಾರಿ ಆಸ್ಪತ್ರೆಗೆ ಬುಧವಾರ ಭೇಟಿ ನೀಡಿ ಪರಿಶೀಲಿಸಿದ ಲೋಕಾಯುಕ್ತ ಎಸ್ಪಿ ವೇದಮೂರ್ತಿ ಆಸ್ಪತ್ರೆಯ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರಿ ಆಸ್ಪತ್ರೆಯ ವಾರ್ಡ್ಗಳಲ್ಲಿ ಬಾಗಿಲು, ಕಿಟಕಿಗಳ ಸರಿಯಾದ ವ್ಯವಸ್ಥೆ ಇಲ್ಲದಿರುವುದು, ರೋಗಿಗಳಿಗೆ ಸರಿಯಾದ ಸಮಯಕ್ಕೆ ಊಟ ನೀಡದೇ ಇರುವರ ಬಗ್ಗೆ ವಿವರ ಪಡೆದ ಲೋಕಾಯುಕ್ತ ಎಸ್ಪಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕೂಡಲೇ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದರು.
ಹೆರಿಗೆ ಕೊಠಡಿಗೆ ತೆರಳಿದ ವೇದಮೂರ್ತಿ ರೋಗಿಗಳನ್ನು ವಿಚಾರಿಸಿದರು. ಮಡಿಲು ಕಿಟ್ ಅನ್ನು ಸಮರ್ಪಕವಾಗಿ ನೀಡಲಾಗುತ್ತಿದೆಯೇ, ಕಿಟ್ ಒಳಗೆ ಹೆರಿಗೆ ಆದವರಿಗೆ 19 ವಸ್ತುಗಳನ್ನು ನೀಡುವ ಬಗ್ಗೆ ಆಯಾ ಹೆರಿಗೆ ವಿಭಾಗದಲ್ಲಿ ನಾಮಫಲಕ ಹಾಕಲು ಸೂಚಿಸಿದ ಅವರು, ಹೆರಿಗೆ ಆದ ತಕ್ಷಣ ಅವರಿಗೆ ಮಡಿಲು ಕಿಟ್ ನೀಡದಿರುವ ಬಗ್ಗೆ ದೂರು ಬಂದಿದ್ದು, ಸರಿಯಾಗಿ ವಿತರಿಸುವಂತೆ ಸೂಚಿಸಿದರು. ನಂತರ ಕಚೇರಿಗೆ ತೆರಳಿ ಆಸ್ಪತ್ರೆಯ ದಾಖಲೆ ಪರಿಶೀಲನೆ ಮಾಡಿದರು. ಆಸ್ಪತ್ರೆ ಒಳಗೆ ನಾನಾ ಸಮಸ್ಯೆಗಳು ಕಂಡು ಬರುತ್ತಿದ್ದು, ಕೂಡಲೇ ಸರಿಪಡಿಸಿಕೊಳ್ಳಲು ಆದೇಶ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement