11 ಜೂಜುಕೋರರ ಬಂಧನ
ಅರಸೀಕೆರೆ: ತಾಲೂಕಿನ ಚಿಕ್ಕಹಲ್ಕೂರು ಗ್ರಾಮದ ಶ್ರೀ ಬಿಳಿಕೆರೆ ರಂಗನಾಥಸ್ವಾಮಿ ದೇವಸ್ಥಾನದ ಛತ್ರದಲ್ಲಿ ಅಂದರ್ ಬಾಹರ್ ಜೂಜಾಡುತ್ತಿದ್ದ 11 ಮಂದಿಯನ್ನು ಪೊಲೀಸರು ಬಂಧಿಸಿರುವ ಘಟನೆ ಬುಧವಾರ ನಡೆದಿದೆ. ತಿಪಟೂರು ತಾಲೂಕಿನ ಚಿಕ್ಕಲಕ್ಕಮ್ಮನಹಳ್ಳಿ ಗ್ರಾಮದ ವಾಶಿಗಳಾದ ಚನ್ನಕೇಶವಮೂರ್ತಿ, ರಂಗನಾಥ, ನಾರಾಯಣ, ಜಯಣ್ಣ, ಗಂಗಾಧರ, ಬಾಲರಾಜ, ಹೇಮರಾಜ, ನಾಗರಾಜ, ಲೋಕೇಶ, ಮಂಜುನಾಥ, ಕುಮಾರ ಬಂಧಿತ ಜೂಜುಕೋರರು. ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 12600 ರು. ನಗದನ್ನು ವಶಪಡಿಸಿಕೊಂಡಿರುವ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.