15ರಂದು ತಾಲೂಕು ಮಟ್ಟದ ದಸರಾ ಕ್ರೀಡಾಕೂಟ
ಹಾಸನ: ತಾಲೂಕು ಮಟ್ಟದ ದಸರಾ ಕ್ರೀಡಾಕೂಟದ ಸ್ಪರ್ಧೆಗಳನ್ನು ಸೆ.15 ರಂದು ಬೆಳಗ್ಗೆ 9ಕ್ಕೆ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಸಲಾಗುತ್ತಿದೆ. ಭಾಗವಹಿಸಲು ಇಚ್ಛಿಸುವ ಹಾಸನ ತಾಲೂಕಿನ ಕ್ರೀಡಾಪಟುಗಳು ಸೆ. 15 ರಂದು ಬೆಳಗ್ಗೆ 9 ಕ್ಕೆ ಜಿಲ್ಲಾ ಕ್ರೀಡಾಂಗಣದಲ್ಲಿ ತರಬೇತುದಾರರಲ್ಲಿ ವರದಿ ಮಾಡಿಕೊಳ್ಳಬೇಕೆಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶಿವಾನಂದ ತಿಳಿಸಿದ್ದಾರೆ.
ಸ್ಪರ್ಧೆಗಳ ವಿವರ: ಪುರುಷರಿಗೆ: ಅಥ್ಲೆಟಿಕ್ಸ್ 100 ಮೀ, 200 ಮೀ, 400ಮೀ, 800ಮೀ, 1500ಮೀ, 5000ಮೀ, ಓಟಗಳು, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಟ್ರಿಪಲ್ ಜಂಪ್, ಜಾವಲಿನ ಥ್ರೋ, ಡಿಸ್ಕಸ್ ಥ್ರೋ, 110 ಮೀ ಹರ್ಡಲ್ಸ್, 4 ್ಢ 100 ಮೀ ರಿಲೇ, 4 ್ಢ 400 ಮೀ ರಿಲೇ, ವಾಲಿಬಾಲ್, ಕಬ್ಬಡಿ, ಖೋ ಖೋ, ಬಾಲ್ ಬ್ಯಾಡ್ಮಿಂಟನ್, ಪುಟ್‌ಬಾಲ್.
ಮಹಿಳೆಯರಿಗೆ: ಅಥ್ಲೆಟಿಕ್ಸ್ 100 ಮೀ, 200ಮೀ, 400ಮೀ, 800ಮೀ, 1500ಮೀ, 3000 ಮೀ ಓಟಗಳು, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಟ್ರಿಪಲ್ ಜಂಪ್, ಜಾವಲಿನ ಥ್ರೋ ಡಿಸ್ಕಸ್ ಥ್ರೋ, 100ಮೀ ಹರ್ಡಲ್ಸ್ 4 ್ಢ 100 ಮೀ ರಿಲೇ, 4 ್ಢ 400 ಮೀ ರಿಲೇ, ವಾಲಿಬಾಲ್, ಕಬ್ಬಡಿ, ಖೋ ಖೋ, ಬಾಲ್ ಬ್ಯಾಡ್ಮಿಂಟನ್.
ಹೆಚ್ಚಿನ ವಿವರಗಳಿಗೆ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಹಾಸನ ಇವರನ್ನು 246056 ಮೂಲಕ ಅಥವಾ ಎಸ್.ಗೋವಿಂದೇಗೌಡ ತಾಲೂಕು ದೈಹಿಕ ಪರಿವೀಕ್ಷಕರ ದೂ.ಸಂ. 9663145305 ಸಂಪರ್ಕಿಸಲು ಕೋರಿದೆ.