ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಜಿಲ್ಲೆ ಅಭಿವೃದ್ಧಿ, ರಾಜಕೀಯ ಬದಲಾವಣೆ ಬಯಸಿರುವ ಮತದಾರ: ಬಿಕೆಸಿ

Mainashree
Updated On : 12 Sept 2013, 10:18 am

ಅರಕಲಗೂಡು: ಜಿಲ್ಲೆ ಅಭಿವೃದ್ಧಿ ಮತ್ತು ರಾಜಕೀಯ ಬದಲಾವಣೆಯನ್ನು ಮತದಾರರು ಬಯಸಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಇದು ಸಾಬೀತು ಆಗಲಿದೆ ಎಂದು ಮಾಜಿ ಸಚಿವ ಬಿ.ಕೆ.ಚಂದ್ರಶೇಖರ್ ತಿಳಿಸಿದರು.
 ಗುರುವಾರ ಪಟ್ಟಣದ ಪ್ರವಾಸಿಮಂದಿರದಲ್ಲಿ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಆಯ್ಕೆ ಕುರಿತು ಇಡೀ ಜಿಲ್ಲೆಯಲ್ಲಿ ಕಾರ್ಯಕರ್ತರು ಹಾಗೂ ಮುಖಂಡರಿಂದ ಅಭಿಪ್ರಾಯ ಸಂಗ್ರಹಿಸುತ್ತಿರುವುದಾಗಿ ಹೇಳಿದರು.  ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಜಾರಿಗೆ ಬಂದಿರುವ ಜನೋಪಯೋಗಿ ಯೋಜನೆಗಳು ಸಾಮಾನ್ಯರನ್ನು ತಲುಪುತ್ತಿದ್ದು, ಇದು ಕೂಡ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ಪ್‌ಕ್ಷ ಹೆಚ್ಚು ಸ್ಥಾನಗಳಿಸಲು ಸಹಕಾರಿಯಾಗಿದೆ ಎಂದರು.
 ಇತ್ತೀಚೆಗೆ ನಡೆದ ರಾಮನಗರ ಮತ್ತು ಮಂಡ್ಯ ಲೋಕಸಭಾ ಉಪ ಚುನಾವಣೆಯಲ್ಲಿ ನಮ್ಮ ಪಕ್ಷ ಅಚ್ಚರಿ ಗೆಲುವು ಸಾಧಿಸಿದ್ದು,ಬಿಜೆಪಿ ಮತ್ತು ಜೆಡಿಎಸ್‌ಗೆ ಅಲ್ಲಿನ ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ಅಲ್ಲದೆ ನಟಿ  ಸಂಸದೆ ರಮ್ಯ ಬಗ್ಗೆ ವಿರೋಧ ಪಕ್ಷದವರು ಅಪಪ್ರಚಾರ ಮಾಡಿದ್ದು, ಅವರು ಶೇ.15ರಷ್ಟು ಮತವನ್ನು ಅಧಿಕವಾಗಿ ಪಡೆಯಲು ಸಹಕಾರಿಯಾಯಿತು ಎಂದು ತಿಳಿಸಿದರು.
ವೀಕ್ಷಕರ ತಂಡದ ಸದಸ್ಯ  ಅಶ್ವಿನ್ ಕುಮಾರ್,ಮಲ್ಲಿಗೆ ವಿರೇಶ್ ಮಾತನಾಡಿದರು. ಶಾಸಕ ಮಂಜು,ಮಾಜಿ ಶಾಸಕ ಪುಟ್ಟೇಗೌಡ, ಎಸ್.ಎಂ.ಆನಂದ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೈರೇಗೌಡ ಮುಂತಾದವರು ಉಪಸ್ಥಿತರಿದ್ದರು.
ಮಂಜುಗೆ ಸಚಿವ ಸ್ಥಾನಕ್ಕೆ ಆಗ್ರಹ: ಕೆಪಿಸಿಸಿ ವೀಕ್ಷಕರು ಅರಕಲಗೂಡು ಪ್ರವಾಸಿ ಮಂದಿರದಲ್ಲಿ ಕಾರ್ಯಕರ್ತರು ಮತ್ತು ಪಕ್ಷದ ಮುಖಂಡರ ಅಭಿಪ್ರಾಯಗಳನ್ನು ಸಂಗ್ರಹಿಸಿ ಹೊರ ಹೋಗುವ ವೇಳೆ ಹೊರಗಿದ್ದ ಸಾವಿರಾರು ಎ.ಮಂಜು ಬೆಬಲಿಗರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಶಾಸಕ ಎ.ಮಂಜು ಅವರಿಗೆ ರಾಜ್ಯ ಸಂಪುಟದಲ್ಲಿ ಸಚಿವ ಸ್ಥಾನ ಕೊಡುವಂತೆ ಆಗ್ರಹಿಸಿದರು. ಕಾರ್ಯಕರ್ತರ ಒತ್ತಾಯ ಆಲಿಸಿದ ಬಿ.ಕೆ.ಚಂಈ ಕುರಿತು ಸಂಬಂಧಪಟ್ಟವರಿಗೆ ತಲುಪಿಸುವ ಕೆಲಸ ಮಾಡುತ್ತೇನೆ ಎಂದಷ್ಟೇ ನುಡಿದು ಮುನ್ನಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement