ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ನವಿಲೆ ಏತ ನೀರಾವರಿ ಸರ್ವೇ ಪೂರ್ಣ: ಶಾಸಕ

Mainashree
Updated On : 12 Sept 2013, 10:20 am

ನುಗ್ಗೇಹಳ್ಳಿ (ಚನ್ನರಾಯಪಟ್ಟಣ ತಾ.): ತಗಡೂರು ಗ್ರಾಮ ಪಂಚಾಯಿತಿ 18 ಕೆರೆಗಳಿಗೆ 25 ಕೋಟಿ ರು. ವೆಚ್ಚದಲ್ಲಿ ನವಿಲೆ ಏತ ನೀರಾವರಿಯಿಂದ ನೀರು ಹರಿಸುವ ಕಾಮಗಾರಿಯ ಸರ್ವೇ ಪ್ರಕ್ರಿಯೆ ಮುಗಿದಿದ್ದು, ಇನ್ನು 3 ತಿಂಗಳಲ್ಲಿ ಸರ್ಕಾರದ ಮಂಜೂರಾತಿ ಪಡೆದು ಕಾಮಗಾರಿ ಪ್ರಾರಂಭಿಸುವುದಾಗಿ ಶಾಸಕ ಬಾಲಕೃಷ್ಣ ಭರವಸೆ ನೀಡಿದರು.
ಸಮೀಪದ ತಗಡೂರು ಲಕ್ಕಅರಸನಹಳ್ಳಿ ಸರ್ಕಲ್‌ನಲ್ಲಿ ಶ್ರೀ ವಿನಾಯಕ ಸಂಘ ಏರ್ಪಡಿಸಿದ್ದ ಗಣಪತಿ ವಿಸರ್ಜನ ಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಾಗೂರು ಏತ ನೀರಾವರಿಯ ಎಂ.ಎಸ್. ಪೈಪ್ ಅಳವಡಿಸುವ 4 ಕೋಟಿ 15 ಲಕ್ಷ ವೆಚ್ಚದ ಕಾಮಗಾರಿಗೆ ಸರ್ಕಾರದ ತಾಂತ್ರಿಕ ಅನುಮೋದನೆ ಸಿಕ್ಕಿದ್ದು, ಇನ್ನೊಂದು ತಿಂಗಳಲ್ಲಿ ಟೆಂಡರ್ ಕೆಲಸ ಮುಗಿಯಲಿದೆ ಎಂದರು.
ತಗಡೂರು ರಸ್ತೆಯಿಂದ ರಂಗನಾಥಸ್ವಾಮಿ ಬೆಟ್ಟಕ್ಕೆ ಸಿಮೆಂಟ್ ರಸ್ತೆ ಲಕ್ಕರಸನಹಳ್ಳಿಯಿಂದ ನುಗ್ಗೇಹಳ್ಳಿಗೆ ಡಾಂಬರ್ ರಸ್ತೆ ಮಾಡಿಸುವ ಭರವಸೆ ನೀಡಿದರು. ಶಿವಾನಂದ ತಗಡೂರು, ಜೆಡಿಎಸ್ ಮುಖಂಡ ಎಲ್.ಡಿ ಪುಟ್ಟರಾಜು, ಗ್ರಾಪಂ ಮಾಜಿ ಅಧ್ಯಕ್ಷ ಎಲ್.ಕೆ ಇಂದ್ರೇಶ್, ಎಲ್.ಕೆ ದೇವರಾಜು, ಗಿರೀಶ್ ತಗಡೂರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement